ಶ್ರೀನಿವಾಸಪುರ: ಪಟ್ಟಣದಲ್ಲಿ ಕಳೆದ ಗುರುವಾರ ಹಾಗೂ ಶುಕ್ರವಾರ ರಾತ್ರಿ ಬಿದ್ದ ಮಳೆಯಿಂದಾಗಿ ಸಂತೆ ಮೈದಾನ, ಕೋರ್ಟ್, ಕಟ್ಟೆಕೆಳಗಿನ ಪಾಳ್ಯ, ವಾರ್ಡ್ ನಂ. 5, ಎಪಿಎಂಸಿ ಮಾರುಕಟ್ಟೆ, ಪಟ್ಟಣದ ಇತರೆ ತಗ್ಗಪ್ರದೇಶಗಳಿಗೆ ತಹಸೀಲ್ದಾರ್ ಜಿ.ಎನ್.ಸುಧೀಂದ್ರ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದ್ದರು.
ಜಲಾವೃತವಾಗಿ ಮಳೆ ನೀರಿನಿಂದಾಗಿ ದಿಗ್ಬಂಧನವಾಗಿ ಜನ ಜೀವನ ಅಸ್ತವಸವಾಗಿ ಜನರು ಸಂಕಷ್ಟಕ್ಕೆ ಈಡಾಗಿದ್ದರು.
ಅದೇ ರೀತಿ ಸಂಸದ ಮಲ್ಲೇಶ್ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಮಳೆಯ ನೀರು ಮನೆಯೊಳಗೆ ನಗ್ಗಲು ಕಾರಣ, ಅದಕ್ಕೆ ಪರಿಹಾರ ಕಂಡುಹಿಡಿಯಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ ಸೋಮವಾರ ಪಟ್ಟಣದ ಸಂತೆ ಮೈದಾನಕ್ಕೆ ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಅವರು ಪುರಸಭೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಳೆದ ಹಾನಿಗೊಳಗಾದ ಮನೆ ಹಾಗೂ ಇತರೆ ಸಾಮಗ್ರಿಗಳ ಬಗ್ಗೆ ಸಮೀಕ್ಷೆ ನಡೆಸಿದರು.