ಜಿಲ್ಲೆ

ಸರ್ವಜ್ಞನ ವಚನ ಬದುಕಿನ ಪ್ರಶ್ನೆಗಳಿಗೆ ಉತ್ತರ

ಹರಿಹರ: ಸರ್ವಜ್ಞನ ಒಂದೊಂದು ವಚನವೂ ಬದುಕಿನ ನೂರಾರು ಪ್ರಶ್ನೆ ಹಾಗೂ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ ಎಂದು ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸರ್ವಜ್ಞನ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಜಾಗತಿಕ ಪಿಡುಗುಗಳಾದ ಜಾತಿ, ಮತ, ಧರ್ಮ ಸಂಘರ್ಷದ ನಾಶಕ್ಕೆ ಸರ್ವಜ್ಞನ ವಚನಗಳು ದಿವ್ಯೌಷಧವಾಗಿದೆ. ಸರ್ವಜ್ಞನನ್ನು ಅನೇಕ ಭೂಮಿಕೆಯಲ್ಲಿ ಕಾಣಬಹುದು. ಅಲ್ಲದೇ ಸಮಾಜದ ಮೂಢನಂಬಿಕೆಗಳನ್ನು ತೊಡೆದು ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.

ಕುಂಬಾರ ಸಮಾಜದ ಯುವ ಸೇನೆ ಅಧ್ಯಕ್ಷ ಚಂದ್ರಶೇಖರ್ ಕುಂಬಾರ್, ಉಪಾಧ್ಯಕ್ಷ ಜಿ. ವೀರಪ್ಪ, ಸಂದಿಮನಿ ಮಲ್ಲಿಕಾರ್ಜುನ್, ಜಿ.ಎಂ. ಮಲ್ಲಿಕಾರ್ಜುನ್, ಗಿರೀಶ್, ಶಂಕರಪ್ಪ, ಜಿ. ಗುರುರಾಜ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.