ರಾಯಬಾಗ ಪಟ್ಟಣದಲ್ಲಿ ಟೆಕ್ವಾಂಡೋ ಪರೀಕ್ಷೆಯಲ್ಲಿ ಉತ್ತೀರ್ಣರಾದವರೊಂದಿಗೆ ಶಾಸಕ ಡಿ.ಎಂ.ಐಹೊಳೆ, ಮಾಧುರಿ ಜಾಧವ, ಸಂದೇಶ ಶೆಟ್ಟಿ, ಮಾಧುರಿ ಜಾಧವ, ಸಂಜಯ ಶಿಂಧೆ, ಜಯದೀಪ ದೇಸಾಯಿ ಇತರರಿದ್ದರು. 
ಜಿಲ್ಲೆ

ಟೆಕ್ವಾಂಡೋ ಅತ್ಯುತ್ತಮ ಸಮರ ಕಲೆ

ರಾಯಬಾಗ: ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಬೆಳೆಯಲು ಟೆಕ್ವಾಂಡೋ ಕ್ರೀಡೆ ಅತ್ಯುತ್ತಮ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಮಹಾದೇವ ಸಭಾಭವನದಲ್ಲಿ ರಾಯಬಾಗ ಟೆಕ್ವಾಂಡೋ ತರಬೇತಿ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟೆಕ್ವಾಂಡೋ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ತಮ್ಮನ್ನು ರಕ್ಷಿಸಿಕೊಳ್ಳಲು ಟೆಕ್ವಾಂಡೋ ಕ್ರೀಡೆ ಕಲಿತುಕೊಳ್ಳಬೇಕು. ವಿದ್ಯಾರ್ಥಿಗಳು ಅತ್ಯುತ್ತಮ ತರಬೇತಿ ಪಡೆದು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.

ಟೆಕ್ವಾಂಡೋ ಪರೀಕ್ಷೆಯಲ್ಲಿ ಭಾಗವಹಿಸಿದ ಒಟ್ಟು 71 ವಿದ್ಯಾರ್ಥಿಗಳಲ್ಲಿ 27 ಯೆಲ್ಲೋ ಬೆಲ್ಟ್, 27 ಗ್ರೀನ್ ಬೆಲ್ಟ್, 13 ಬ್ಲೂ ಬೆಲ್ಟ್, 4 ರೆಡ್ ಬೆಲ್ಟ್ ವಿತರಿಸಲಾಯಿತು.

ಮಹಾವೀರ ಆಂಗ್ಲ ಮಾಧ್ಯಮ ವಸತಿ ಶಾಲೆ ಪ್ರಾಚಾರ್ಯ ಮಾಧುರಿ ಜಾಧವ, ಉದ್ಯಮಿ ಸಂದೇಶ ಶೆಟ್ಟಿ, ಯೋಧ ಲಕ್ಷ್ಮಣ ಪೂಜಾರಿ, ತರಬೇತಿದಾರರಾದ ಸಂಜಯ ಶಿಂಧೆ, ಜಯದೀಪ ದೇಸಾಯಿ, ರಾಜೇಶ ಕಬಾಡಗಿ ಇತರರಿದ್ದರು.