ಮೈಸೂರು: ಒಲಿಂಪಿಕ್ ಮಹರ್ಷಿ ಟೇಬಲ್ ಟೆನಿಸ್ ಅಕಾಡೆಮಿಯಿಂದ ಏಪ್ರಿಲ್ 10ರಿಂದ 30ರ ವರೆಗೆ ವಿದ್ಯಾರ್ಥಿಗಳಿಗೆ ಟೇಬಲ್ ಟೆನಿಸ್ ತರಬೇತಿ ಶಿಬಿರ ಆಯೋಜಿಸಲಾಗಿದೆ.
5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬೆಳಗ್ಗೆ 6ರಿಂದ 10ಗಂಟೆವರೆಗೆ ಹಾಗೂ ಸಂಜೆ 4 ರಿಂದ ಸಂಜೆ 8ಗಂಟೆವರೆಗೆ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಶಾಲೆಯ ಆವರಣದಲ್ಲಿ ಶಿಬಿರ ನಡೆಯಲಿದೆ. ಮೂಲ ಕೌಶಲಗಳ ಅಭಿವೃದ್ಧಿ, ಫಿಟ್ನೆಸ್, ಚುರುಕುತನ, ಮಾನಸಿಕ ಸ್ಥಿರತೆ ಇನ್ನಿತರ ತರಬೇತಿಯನ್ನು ತರಬೇತುದಾರ ಅಕ್ಷಯ್ ಮಹಂತ್ ನೀಡಲಿದ್ದಾರೆ. ಮಾಹಿತಿಗೆ 9686475604 ಅನ್ನು ಸಂಪರ್ಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.