ಜಿಲ್ಲೆ

ಕ್ರೀಡೆಗೆ ಮಾನಸಿಕ ಆರೋಗ್ಯವೂ ಮುಖ್ಯ; ಸಂಗಮ ಬೈಲೂರು ಅಭಿಮತ

Belagavi - Ravi Arjun Gosavi

ಬೆಳಗಾವಿ : ಸದೃಢ ದೇಹದ ಜತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಕ್ರೀಡೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಯಶಸ್ಸು ಸಾಧಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಟೇಬಲ್ ಟೆನ್ನಿಸ್ ಸಂಸ್ಥೆ ಉಪಾಧ್ಯಕ್ಷ, ಬೆಳಗಾವಿ ಜಿಲ್ಲಾ ಟೇಬಲ್ ಟೆನ್ನಿಸ್ ಸಂಸ್ಥೆ ಗೌರವ ಕಾರ್ಯದರ್ಶಿ  ಸಂಗಮ ಬೈಲೂರು ಹೇಳಿದರು.

ನಗರದಲ್ಲಿನ ಕೆಎಲ್‌ಇ ಸಂಸ್ಥೆಯ ಬಿ ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಬೆಳಗಾವಿಯ ಅಂತರ ಕಾಲೇಜು ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಮಂಗಳವಾರ ಉದ್ಘಾಟಿಸಿ, ಮಾತನಾಡಿದರು.
ಕ್ರೀಡೆಯಲ್ಲಿ ಉತ್ತಮಮಟ್ಟವನ್ನು ಸಾಧಿಸುವ ಬಗ್ಗೆ ಕ್ರೀಡಾಪಟುಗಳಿಗೆ  ಬೆಳಗ್ಗೆ ಬೇಗಏಳುವುದು, ಸೋಲಿನಿಂದ ಮೇಲೇಳುವುದು, ಯಶಸ್ವಿ ಜನರೊಂದಿಗೆ ಸ್ನೇಹ ಬೆಳಸಿಕೊಳ್ಳುವುದು, ಸರಿಯಾದ ಶಿಕ್ಷಣ ಪಡೆಯುವುದು, ಸಾಮಾಜಿಕ ಜೀವನವನ್ನು ತ್ಯಾಗ ಮಾಡುವುದು ಮತ್ತು ಕೋಪವನ್ನು ನಿಯಂತ್ರಿಸುವುದು ಯಶಸ್ವಿ ಕ್ರೀಡಾಪಟುಗಳ ಗುಟ್ಟು ಎಂದು ಹೇಳಿದರು.
 

ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ವಕೀಲ.ಆರ್.ಬಿ.ಬೆಲ್ಲದ  ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಖಾಲೀದ್, ಡಾ.ಖಾಲೀದ್ ಖಾನ್ ಸೇರಿದಂತೆ ಇತರರಿದ್ದರು. ಪ್ರಾಚಾರ್ಯ ಡಾ.ಬಿ.ಜಯಸಿಂಹ ಸ್ವಾಗತಿಸಿದರು,  ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರೀಚಾ ರಾವ್ ವಂದಿಸಿದರು.ಪವಿತ್ರಾ ಪಾಟೀ  ನಿರೂಪಿಸಿದರು.