ಕೆ.ಆರ್.ಪೇಟೆ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಟಿ. ಬಲದೇವ್ ಮತ್ತು ಲತಾಮಣಿ ಅವರನ್ನು ಶಾಸಕ ಎಚ್.ಟಿ.ಮಂಜು ಅಭಿನಂದಿಸಿದರು. ಶೀಳನೆರೆ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಎಂ.ಮೋಹನ್, ಎಚ್ .ಟಿ.ಲೋಕೇಶ್, ರಂಗನಾಥಪುರ ನಾಗರಾಜು ಇತರರಿದ್ದರು. 
ಜಿಲ್ಲೆ

ಟಿ.ಬಲದೇವ್ ಅಧ್ಯಕ್ಷ, ಲತಾಮಣಿ ಉಪಾಧ್ಯಕ್ಷೆ

ಕೆ.ಆರ್.ಪೇಟೆ: ತಾಲೂಕು ಟಿಎಪಿಸಿಎಂಎಸ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ತೆರ್ನೇನಹಳ್ಳಿ ಟಿ.ಬಲದೇವ್ ಹಾಗೂ ಉಪಾಧ್ಯಕ್ಷರಾಗಿ ಬಂಡಿಹೊಳೆ ಲತಾಮಣಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

14 ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 11 ಮತ್ತು ಕಾಂಗ್ರೆಸ್ ಬೆಂಬಲಿತ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂಘದ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಬಲದೇವ್ ಮತ್ತು ಲತಾಮಣಿ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವಿರೋಧ ಆಯ್ಕೆ ಘೊಷಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಪಕ್ಷದ ಟಿ.ಬಲದೇವ್, ಲತಾಮಣಿ, ಶೀಳನೆರೆ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಮೋಹನ್, ಎಚ್.ಟಿ.ಲೋಕೇಶ್, ಜ್ಯೋತಿ, ರಂಗನಾಥಪುರ ನಾಗರಾಜು, ಬೊಮ್ಮೇನಹಳ್ಳಿ ಮಂಜುನಾಥ್, ನಾಗರಘಟ್ಟ ದಿಲೀಪ್, ಕಿಕ್ಕೇರಿ ಮಧು ಸೇರಿ 10 ಜನ ನೂತನ ನಿರ್ದೇಶಕರು ಭಾಗವಹಿಸಿದ್ದರು. ಜೆಡಿಎಸ್‌ನ ಬಿ.ಎಂ.ಕಿರಣ್, ಕಾಂಗ್ರೆಸ್‌ನ ಮಡುವಿನಕೋಡಿ ಎಂ.ಪಿ.ಲೋಕೇಶ್, ಕಿಕ್ಕೇರಿ ಸುರೇಶ್ ಮತ್ತು ಅಘಲಯ ಎ.ವೈ.ವಿಜಯಕುಮಾರ್ ಗೈರು ಹಾಜರಾಗಿದ್ದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಕ್ಷೇತ್ರದಲ್ಲಿ ಜೆಡಿಎಸ್ ಬಲ ಕುಂದಿಲ್ಲ. ರೈತಾಪಿ ವರ್ಗ ಜೆಡಿಎಸ್ ಪರವಾಗಿದೆ ಎನ್ನುವುದನ್ನು ಚುನಾವಣೆ ಮತ್ತೊಮ್ಮೆ ನಿರೂಪಿಸಿದೆ ಎಂದರು.

ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಜವಾಬ್ದಾರಿಯನ್ನು ಅರಿತು ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ನಿರ್ದೇಶಕರು ಕೈ ಜೋಡಿಸಬೇಕು. ಈ ಮೂಲಕ ಪಕ್ಷಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಸಲಹೆ ನೀಡಿದರು.

ಟಿಎಪಿಸಿಎಂಎಸ್ ಸಂಸ್ಥೆ ನೂತನ ನಿರ್ದೇಶಕರಾದ ಶೀಳನೆರೆ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಎಂ.ಮೋಹನ್, ಎಚ್ .ಟಿ.ಲೋಕೇಶ್, ರಂಗನಾಥಪುರ ನಾಗರಾಜು, ನಾಗರಘಟ್ಟ ದಿಲೀಪ್ ಕುಮಾರ್, ಕಿಕ್ಕೇರಿ ಮಧು, ಅಗ್ರಹಾರ ಬಾಚಹಳ್ಳಿ ಬಿ.ಕೆ.ಜ್ಯೋತಿ, ದೇವರಾಜು, ಬೊಮ್ಮೇನಹಳ್ಳಿ ಮಂಜುನಾಥ್, ಜೆಡಿಎಸ್ ಪಕ್ಷದ ಹಲವು ಮುಖಂಡರು ಹಾಗೂ ನೂರಾರು ಕಾರ್ಯ ಕರ್ತರು ಹಾಜರಿದ್ದು, ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದರು.