ಜಿಲ್ಲೆ

ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ದಕ್ಷಿಣ ಕನ್ನಡ ಜಿಲ್ಲೆಗೆ

Mangaluru - Prakash MC Manjeshwar

ಮಂಗಳೂರು: ರಾಜ್ಯ ಸರಕಾರದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಮಾರ್ಚ್ 7 ರಿಂದ 9 ರವರೆಗೆ ದ.ಕ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಮಾರ್ಚ್ 7 ರಂದು ರಾತ್ರಿ 10:30 ಗಂಟೆಗೆ ಧರ್ಮಸ್ಥಳದ ಸನ್ನಿಧಿ ಅತಿಥಿ ಗೃಹ ಆಗಮನ - ವಾಸ್ತವ್ಯ, ಮಾರ್ಚ್ 8 ರಂದು ಬೆಳಿಗ್ಗೆ 9:30 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ, ಮಧ್ಯಾಹ್ನ 2:30 ಗಂಟೆಗೆ ಬಂಟ್ವಾಳ ಪಕ್ಷದ ಕಚೇರಿಗೆ ಭೇಟಿ, ಸಂಜೆ 6:30 ಗಂಟೆಗೆ ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿಯವರು ಬಂಟ್ವಾಳ ತಾಲೂಕು ನಾವೂರು ಕೂಡಿಬೈಲಿನಲ್ಲಿ ಏರ್ಪಡಿಸಿರುವ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ರಾತ್ರಿ 8.30 ಗಂಟೆಗೆ ಚಿಕ್ಕಮಗಳೂರಿಗೆ ತೆರಳಲಿದ್ದಾರೆ.