ಕಟಕೋಳ: ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸುವುದೇ ನಾವು ದೇಶಕ್ಕೆ ನೀಡಬಹುದಾದ ಅಮೂಲ್ಯ ಕೊಡುಗೆ ಎಂದು ಸ್ಪೋಕೋ ಸಂಸ್ಥೆಯ ನಿರ್ದೇಶಕ
ಎಸ್.ಆರ್. ನವರಕ್ಕಿ ಹೇಳಿದರು.
ಸಮೀಪದ ಚಂದರಗಿಯ ಎಸ್ಎಂ ಕಲೂತಿ ಸಂಯುಕ್ತ ಕ್ರೀಡಾವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಂವಿಧಾನ ಅಧ್ಯಯನ ಮಾಡಿ ಅದರಂತೆ ನಡೆದಾಗ ಮಾತ್ರ ಸಮಾಜದ ಕಳಂಕಗಳಾದ ಭ್ರಷ್ಟಾಚಾರ, ಜಾತೀಯತೆ, ಬೇರು ಸಹಿತ ನಿಮೂರ್ಲನೆ ಮಾಡಬಹುದು ಎಂದರು.
ಶಾಲೆಯ 26ನೇ ಎನ್ಸಿಸಿ ಬಟಾಲಿಯನ್ ತಂಡದವರಿಂದ ಪಥಸಂಚಲನ ಕಾರ್ಯಕ್ರಮವು ಎನ್ಸಿಸಿ ಆಫೀಸರ್ ಜೆ.ಬಿ. ಮೇಟಿ ನೇತತ್ವದಲ್ಲಿ ಜರುಗಿತು. ವಿದ್ಯಾರ್ಥಿಗಳಾದ ಅಭಯ ಇಟ್ನಾಳ, ಸುರಜ ಮಾಳನ್ನವರ, ಸಮರ್ಥ ಗಣಾಚಾರಿ, ಶಾಲಿವಾಹನ ಬಿದರಿ, ಶ್ರೀಧರ ಪಾಟೀಲ, ಸೂರಜ ಗುರ್ಲಹೊಸೂರ, ಶಶಾಂಕ ಕೋವಳ್ಳಿ, ಶಿವಕುಮಾರ ಗುಡಸಲಮನಿ, ರೋಹಿತ ಕಡೆಮನಿ ಮತ್ತು ಉಪನ್ಯಾಸಕ ವಸಂತ ಯರಗಟ್ಟಿ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕ ಉದಯಕುಮಾರ ಕೋಟಿವಾಲೆ, ಸಿವಿಲ್ ಇಂಜನಿಯರ್ ಜೆ.ವಿ. ಮುರಗೋಡ, ಪ್ರಾಚಾರ್ಯರಾದ ಎಸ್.ಬಿ. ಪಾಟೀಲ, ಸಂತೋಷ ಮಿರಜಕರ್, ಪಾಂಡುರಂಗ ಪಾಟೀಲ ಹಾಗೂ ಶಾಲೆಯ ಎಲ್ಲ ಶಿಕ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ ಕೆ.ವಿ. ಪಮ್ಮಾರ ನಿರೂಪಿಸಿದರು.