ಜಿಲ್ಲೆ

ಎಸ್‌ವೈಎಸ್ ಸಾಂತ್ವನ ಕೇಂದ್ರ ಉದ್ಘಾಟನೆ

ಸೌಮ್ಯ ಆರ್

ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ದ.ಕ ದಕ್ಷಿಣ ಜಿಲ್ಲಾ ಸಮಿತಿಯಿಂದ ಪಶ್ಚಿಮ ಜಿಲ್ಲಾ ಸಾಂತ್ವನ ಕೇಂದ್ರದ ಉದ್ಘಾಟನಾ ಸಮಾರಂಭ ಅಡ್ಯಾರ್‌ನಲ್ಲಿ ನಡೆಯಿತು.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಉದ್ಘಾಟಿಸಿದರು. ಎಸ್‌ವೈಎಸ್ ದ.ಕ ಪಶ್ಚಿಮ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಂತ್ವನ ಇಸಾಬ ಮುಖ್ಯಸ್ಥ ಹಾಫಿಳ್ ಯಾಕೂಬ್ ಸಅದಿ ನಾವೂರು ದಿಕ್ಸೂಚಿ ಭಾಷಣ ಮಾಡಿದರು. ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಕೋಶಾಧಿಕಾರಿ ಮನ್ಸೂರ್ ಅಲಿ ಕೋಟಗದ್ದೆ, ರಾಜ್ಯ ಉಪಾಧ್ಯಕ್ಷ ಖಲೀಲ್ ಮಾಲಿಕಿ ಬೋಳಂತೂರು ಮಾತನಾಡಿದರು.

ಜಿಲ್ಲಾ ಕೋಶಾಧಿಕಾರಿ ರಝಾಕ್ ಭಾರತ್, ಉಪಾಧ್ಯಕ್ಷ ಬದ್ರುದ್ದೀನ್ ಅಝ್ಹರಿ ಕೈಕಂಬ, ನವಾಝ್ ಸಖಾಫಿ ಅಡ್ಯಾರ್ ಪದವು, ಜಿಲ್ಲಾ ಕಾರ್ಯದರ್ಶಿ ಮುತ್ತಲಿಬ್ ವೇಣೂರು, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್, ಪ್ರಮುಖರಾದ ಇಬ್ರಾಹಿಂ ಸಖಾಫಿ ಸೆರ್ಕಳ, ಹಕೀಂ ಪೂಮಣ್ಣು, ಉಸ್ಮಾನ್ ಝುಹ್ರಿ ಕಿನ್ಯ, ಶರೀಫ್ ಮುಡಿಪು, ಜಬ್ಬಾರ್ ಕಣ್ಣೂರು, ಉಮರ್ ಮದನಿ ಬೋಳಿಯಾರ್, ಖಾಸಿಂ ಲತೀಪ್ ಮಂಜನಾಡಿ, ಹಮೀದ್ ನಾಟೆಕಲ್, ಇಕ್ಬಾಲ್ ಮಧ್ಯನಡ್ಕ, ಮುಬೀನ್ ಮಲಾರ್, ಯಾಕೂಬ್ ಅಡ್ಯಾರ್‌ಪದವು ಮೊದಲಾದವರು ಉಪಸ್ಥಿತರಿದ್ದರು. ಫಾರೂಕ್ ಶೇಡಿಗುರಿ ವಂದಿಸಿದರು. ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮ ನಿರೂಪಿಸಿದರು.