ಜಿಲ್ಲೆ

ಅಭಿವೃದ್ಧಿ ಹೊಂದಿದ ಕೇರಳ ಸರ್ಕಾರದ ಗುರಿ : ಶಾಸಕ ಸಿ.ಎಚ್.ಕುಂಞಂಬು ಅಭಿಮತ

ಸೌಮ್ಯ ಆರ್

ಮುಳ್ಳೇರಿಯ: ರಾಜ್ಯ ಸರ್ಕಾರವು 50 ವರ್ಷಗಳ ಭವಿಷ್ಯದ ದೃಷ್ಟಿಕೋನದೊಂದಿಗೆ ಚಟುವಟಿಕೆಗಳನ್ನು ನಡೆಸುತ್ತಿದೆ. ಅಭಿವೃದ್ಧಿ ಹೊಂದಿದ ಕೇರಳ ಸರ್ಕಾರದ ಗುರಿ ಎಂದು ಶಾಸಕ ಸಿ.ಎಚ್.ಕುಂಞಂಬು ಹೇಳಿದರು.

ಅಡೂರಿನಲ್ಲಿ ದೇಲಂಪಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ದೇಲಂಪಾಡಿ ಗ್ರಾಪಂ ಅಧ್ಯಕ್ಷೆ ಎ.ಪಿ.ಉಷಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಸುರೇಂದ್ರನ್ ವರದಿ ಮಂಡಿಸಿದರು. ಅಭಿವೃದ್ಧಿ ವ್ಯವಹಾರಗಳ ಸಮಿತಿ ಅಧ್ಯಕ್ಷೆ ಪ್ರಿಯಾ ಹರೀಶ್, ಗ್ರಾಪಂ ಸದಸ್ಯರಾದ ಕೆ.ಬಿಂದು, ಟಿ.ಎ.ಇಕ್ಬಾಲ್, ವೆಂಕಟರಮಣ, ರಾಧಾಕೃಷ್ಣ, ಸಿ.ಎನ್.ನಿಶಾ, ಯೋಜನಾ ಸಮಿತಿ ಉಪಾಧ್ಯಕ್ಷ ಎ.ಚಂದ್ರಶೇಖರ, ಬಿ.ಸುಮಾ, ಕಂದಾಯ ಅಧಿಕಾರಿ ಧನಂಜಯನ್, ಕ್ರೀಡಾಪಟು ಜಯಶ್ರೀ, ಸಿ.ಕೆ.ಕುಮಾರನ್, ಎ.ಪಿ.ಕುಶಲನ್ ಉಪಸ್ಥಿತರಿದ್ದರು.

ಪಂಚಾಯಿತಿಯ ಐದು ವರ್ಷಗಳ ಅಭಿವೃದ್ಧಿ ಸಾಧನೆಗಳನ್ನು ಒಳಗೊಂಡ ಪುರವಣಿಯನ್ನು ಶಾಸಕ ಸಿ.ಎಚ್.ಕುಂಞಂಬು ಬಿಡುಗಡೆಗೊಳಿಸಿದರು. ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೇರಳವನ್ನು ಪ್ರತಿನಿಧಿಸಿದ ಜಯಶ್ರೀ ಅವರನ್ನು ಶಾಸಕರು ಸನ್ಮಾನಿಸಿದರು. ದೇಲಂಪಾಡಿ ಗ್ರಾಪಂ ಉಪಾಧ್ಯಕ್ಷ ಡಿ.ಎ.ಅಬ್ದುಲ್ಲ ಕುಂಞ್ಞೆ ಸ್ವಾಗತಿಸಿದರು. ಕಾರ್ಯದರ್ಶಿ ಜಯನ್ ಡಿ.ನಾಯರ್ ವಂದಿಸಿದರು.