ಜಿಲ್ಲೆ

ಸೇವಾ ಪ್ರತೀಕದ ಸಂಕೇತ ಸ್ಕೌಟ್ಸ್, ಗೈಡ್ಸ್

ಶಿರಹಟ್ಟಿ: ರಾಬರ್ಟ್ ಬೇಡನ್ ಪೋವೆಲ್ ಅವರು 1907ರಲ್ಲಿ ಸ್ಥಾಪಿಸಿದ ಭಾರತ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಸೇವಾ ಪ್ರತೀಕದ ಸಂಕೇತವಾಗಿದೆ ಎಂದು ಪಪಂ ಮಾಜಿ ಅಧ್ಯಕ್ಷ ಎಚ್.ಡಿ. ಮಾಗಡಿ ಹೇಳಿದರು.


ಭಾರತ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಶಿರಹಟ್ಟಿ ತಾಲೂಕು ಘಟಕದಿಂದ ಪಟ್ಟಣದ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗೀತಗಾಯನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು


ಇಸಿಒ ಉಮೇಶ ಹುಚ್ಚಯ್ಯನಮಠ ಮಾತನಾಡಿ, ದೇವರಲ್ಲಿ ಶ್ರದ್ಧಾ, ಭಕ್ತಿಯ ಗುಣದೊಂದಿಗೆ ದೈಹಿಕ, ಮಾನಸಿಕ, ಅಧ್ಯಾತ್ಮಿಕ ವಿಕಸನಕ್ಕೆ ಸ್ಕೌಟ್, ಗೈಡ್ಸ್ ಸಂಸ್ಥೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ, ಮತ್ತು ಸ್ಪರ್ಧಾತ್ಮಕ ಮನೋಭಾವ ತುಂಬುವ ಕಾರ್ಯ ಶ್ಲಾಘನೀಯ ಎಂದರು.


ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್. ಹವಳದ. ಎಸ್.ಎಂ. ಮುಳಗುಂದ, ವಿ.ಎಚ್. ಮಾಲಸೂರೆ, ಯಾಸ್ಮಿನ್ ಶಿರಹಟ್ಟಿ, ಜಯಶ್ರೀ ಪಾಟೀಲ, ಜಿ.ಎ. ಹುಲಸೂರ, ಎಚ್.ವೈ. ಹೊಸಮನಿ, ಬಸವರಾಜ ಯರಗುಪ್ಪಿ, ಎಂ.ಎಂ. ಸಾವಿರಕುರಿ ಹಾಗೂ ತಾಲೂಕಿನ ಸ್ಕೌಟ್ಸ್, ಗೈಡ್ಸ್ ಸೇವಾ ಪ್ರಮುಖರು ಇದ್ದರು. ಸಂಸ್ಥೆಯ ತಾಲೂಕು ಕಾರ್ಯದರ್ಶಿ ಎಂ.ಎ. ಬುಕಿಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಲಮಾಣಿ ನಿರ್ವಹಿಸಿದರು.