ಹುಬ್ಬಳ್ಳಿ: ನೈಋತ್ಯ ರೈಲ್ವೆ ವತಿಯಿಂದ ವಿಚಕ್ಷಣ ಜಾಗೃತಿ ಚಟುವಟಿಕೆಯ ಭಾಗವಾಗಿ ಇಲ್ಲಿಯ ರೈಲ್ವೆ ಇನ್ಸ್ಟಿಟ್ಯೂಟ್ನಿಂದ ರೇಲ್ವೆ ನಿಲ್ದಾಣದವರೆಗೆ ಸೋಮವಾರ ವಾಕ್ಥಾನ್ ನಡೆಸಲಾಯಿತು.
ಚಾಲನೆ ನೀಡಿದ ನೈಋತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರ ಮಾತನಾಡಿ, ‘ಭ್ರಷ್ಟಾಚಾರದಿಂದ ದೂರವಿರಿ-ರಾಷ್ಟ್ರಕ್ಕೆ ಬದ್ಧರಾಗಿರಿ’ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ವಾಕ್ಥಾನ್ ಆಯೋಜಿಸಿದ್ದೇವೆ. ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣ ಕುರಿತು ರೈಲ್ವೆ ಸಿಬ್ಬಂದಿ, ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ತಿಳಿವಳಿಕೆ ನೀಡುವುದು ಹಾಗೂ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಹೆಚ್ಚುವರಿ ಮಹಾಪ್ರಬಂಧಕ ಯು. ಸುಬ್ಬರಾವ್, ಹಿರಿಯ ಉಪ ಮಹಾಪ್ರಬಂಧಕ ಮನೋರಂಜನ್ ಪ್ರಧಾನ, ಇತರರು ಇದ್ದರು. ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ಸಿಬ್ಬಂದಿ ಬೀದಿ ನಾಟಕ ಪ್ರದರ್ಶಿಸಿದರು.