ಜಿಲ್ಲೆ

ಸ್ವೀಚ್ ಬೋರ್ಡ್ ರೀಪೇರಿ ಮಾಡುವಾಗ ವಿದ್ಯುತ್ ತಗುಲಿ ಸಾವು

Haveri - Kariyappa Aralikatti

ಬ್ಯಾಡಗಿ: ಮನೆಯಲ್ಲಿ ಕರೆಂಟ್ ಸ್ವೀಚ್ ಬೋರ್ಡ್‌ಅನ್ನು ರೀಪೇರಿ ಮಾಡುತ್ತಿದ್ದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಕಲ್ಲೇದೇವರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಪ್ರವೀಣ ಕಾಂತೇಶ ಕುಲಕರ್ಣಿ (62) ಮೃತ ವ್ಯಕ್ತಿ.
ಇವರು ಮನೆಯಲ್ಲಿ ವಿದ್ಯುತ್ ಬಾರದ ಕಾರಣ ಸ್ವೀಚ್ ಬೋರ್ಡ್‌ನಲ್ಲಿ ರೀಪೇರಿ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.