ಕಾರ್ಕಳ: ಈಜು ಮನುಷ್ಯನ ಏಕಾಗ್ರತೆ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ಕಾರ್ಕಳದಲ್ಲಿ ಇನ್ನಷ್ಟು ಈಜು ಪಟುಗಳಿಗೆ ಈ ಸಂಸ್ಥೆಯಿಂದ ಪ್ರೇರಣೆ ಸಿಗುವಂತಾಗಲಿ. ಎರಡೂ ಜಿಲ್ಲೆಯ ಈಜು ಪಟುಗಳನ್ನು ಕಾರ್ಕಳದ ಮಣ್ಣಿಗೆ ಕರೆಸಿ ಸ್ಪರ್ಧೆ ನಡೆಸುತ್ತಿರುವ ಸಂಘಟನೆ ಕಾರ್ಯ ಶ್ಲಾಘನೀಯ ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ತಾಲೂಕು ಕ್ರೀಡಾಂಗಣ ಬಳಿಯಲ್ಲಿರುವ ಈಜುಕೊಳದಲ್ಲಿ ಅಕ್ವಾ ಸೆಂಟರ್ ಕಾರ್ಕಳ ವತಿಯಿಂದ ನಡೆದ ಅಕ್ವಾ ಅಮಿಗೋಸ್ ಸ್ವಿಮ್ಮಿಂಗ್ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು.
ಅಕ್ವಾ ಸೆಂಟರ್ ಕಾರ್ಕಳದಿಂದ ತರಬೇತು ಪಡೆದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟ ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನುಗೌರವಿಸಲಾಯಿತು.
ಅಂತಾರಾಷ್ಟ್ರೀಯ ಈಜು ಕ್ರೀಡಾಪಟು ವಿದ್ಯಾ ಪೈ, ವೀ ಒನ್ ಅಕ್ವಾ ಸೆಂಟರ್ ನಿರ್ದೇಶಕಿ ರೂಪಾ, ನವೀನ್ ಹಾಗೂ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ವಿಠ್ಠಲ್, ಶಿಕ್ಷಕಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿ, ಪುರುಷರು, ಮಹಿಳಾ ಸ್ಪರ್ಧಿಗಳು ಭಾಗವಹಿಸಿದರು. ಶಾರ್ವರಿ ಪ್ರಾರ್ಥಿಸಿ, ರಮಿತಾ ಶೈಲೇಂದ್ರ ಕಾರ್ಯಕ್ರಮ ನಿರೂಪಿಸಿದರು.