ಶೃಂಗೇರಿ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ ಹೆಚ್ಚು ಅಂಕಗಳಿಸಿ ನಾಲ್ಕು ಚಿನ್ನದ ಪದಕ ಪಡೆದ ತಾಲೂಕಿನ ಹೊಸ್ಕೆರೆಯ ಹೆಚ್.ಯು.ಶ್ವೇತಾ ಅವರನ್ನು ಅವರ ಸ್ವಗೃಹದಲ್ಲಿ ಚಿಂತನಾ ಬಳಗದ ಮುಖ್ಯಸ್ಥ ಗಣಿತವನ ಶಿವಶಂಕರ್ ಗೌರವಿಸಿದರು.
ಜೆಸಿಬಿಎಂ ಕಾಲೇಜಿನಲ್ಲಿ ಬಿಕಾಂ ಅಂತಿಮ ಪದವಿ ಪರೀಕ್ಷೆಯಲ್ಲಿ 2022ರಲ್ಲಿ ಪ್ರಥಮ ರ‌್ಯಾಂಕ್ ಪಡೆದಿದ್ದ ಹೆಚ್.ಯು.ಶ್ವೇತಾ ಬೆಂಗಳೂರಿನ ಸಾಯಿ ಶ್ರೀವಿದ್ಯಾ ಟೆಕ್ನಲಾಜಿ ವಿದ್ಯಾಲಯದಲ್ಲಿ ಎಂಬಿಎ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್‌ಗಳಿಸಿದ ಇವರು ಗ್ರಾಮೀಣ ಪ್ರದೇಶದ ಹೊಸ್ಕೆರೆ ಕೃಷಿಕ ಉಮೇಶ್ ನಾಯ್ಕ ಹಾಗೂ ಗೀತಾ ಅವರ ಸುಪುತ್ರಿ. ಗೌರವ ಸ್ವೀಕರಿಸಿ ಶ್ವೇತಾ ಮಾತನಾಡಿ, ನನ್ನ ಸಾಧನೆಗೆ ಪಾಲಕರು ಹಾಗೂ ಶಿಕ್ಷಕರು ನೀಡಿದ ಪ್ರೋತ್ಸಾಹಕ್ಕೆ ಸದಾ ಚಿರಋಣಿ. ಆಡಳಿತಾತ್ಮಕ ಸೇವೆಗಳಲ್ಲಿ ಸೇವೆ ಸಲ್ಲಿಸುವ ಹಂಬಲವಿದ್ದು ಮುಂದೆ ಕೆಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು.