ಜಿಲ್ಲೆ

ಸ್ವೀಪ್​ ಪರಿಶ್ರಮಕ್ಕೆ ಸಿಕ್ಕ ಫಲ

ವಿಕ್ರಮ ನಾಡಿಗೇರ ಧಾರವಾಡ
ಚುನಾವಣೆ ಬಂದರೆ ಸಾಕು ಮತದಾನ ಪ್ರಮಾಣ ಹೆಚ್ಚಿಸುವುದೇ ಸವಾಲಿನ ಕೆಲಸ. ಮತದಾನ ಜಾಗೃತಿಗೆ ಲಾಂತರ ರೂ. ಖರ್ಚು ಮಾಡಲಾಗುತ್ತದೆ. ಸುಮಾರು 10 ವರ್ಷಗಳಲ್ಲಿ ಮತದಾನದ ಜಾಗೃತಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪ್ರಸಕ್ತ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ ಜಿಲ್ಲಾ ಸ್ವೀಪ್​ (ಸಿಸ್ಟಮ್ಯಾಟಿಕ್​ ವೋಟರ್ಸ್​ ಎಜುಕೇಷನ್​ ಆ್ಯಂಡ್​ ಎಲೆಕ್ಟೊರಲ್​ ಪಾಟಿರ್ಸಿಪೇಷನ್​) ಸಮಿತಿ ನಡೆಸಿದ್ದ ಜಾಗೃತಿ ಕಾರ್ಯ ಹಾಗೂ ವಿಭಿನ್ನ ಪ್ರಯೋಗಗಳು ಲ ನೀಡಿವೆ.
ಚುನಾವಣೆಯಲ್ಲಿ ಮತದಾನ ಹೆಚ್ಚಿಸಲು ಸುಮಾರು 4 ತಿಂಗಳಿಂದ ಜಿಲ್ಲಾ ಸ್ವೀಪ್​ ಅನೇಕ ಜಾಗೃತಿ ಕಾರ್ಯಕ್ರಮ ಹಾಗೂ ವಿಭಿನ್ನ ಪ್ರಯೋಗಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿತ್ತು. ಹೀಗಾಗಿ ಜಿಲ್ಲೆಯಲ್ಲಿ 2019ರ ಲೋಕಸಭೆ ಚುನಾವಣೆಗಿಂತ ಈ ಬಾರಿ ಗಣನೀಯ ಮತದಾನ ಹೆಚ್ಚಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಶೇ. 65.99ರಷ್ಟು, 2019ರ ಲೋಕಸಭೆ ಚುನಾವಣೆಯಲ್ಲಿ ಶೇ. 70.12 ಮತದಾನವಾಗಿತ್ತು. ಈ ಬಾರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕೆಂಬ ಉದ್ದೇಶದಿಂದ ಸ್ವೀಪ್​ ಸಮಿತಿ ಅನೇಕ ಯೋಜನೆ ರೂಪಿಸಿತ್ತು. ಅದರಂತೆ 2024ರ ಚುನಾವಣೆಯಲ್ಲಿ ಶೇ. 74.37ರಷ್ಟು ಮತದಾನವಾಗುವ ಮೂಲಕ ಹಿಂದಿನ ಚುನಾವಣೆಗಿಂತ ಶೇ. 4.25ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ.
ಮತದಾನ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್​ ಸಮಿತಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕೈಗೊಂಡಿತ್ತು. ಮತಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿ, ಸ್ಥಳಿಯ ಜನಪದ ಕಲೆಗಳ ಜತೆಗೆ ಸಾಂಪ್ರದಾಯಿಕ ಮತಗಟ್ಟೆ, ಪಿಂಕ್​ ಮತಗಟ್ಟೆ ಸೇರಿ ಹಲವು ವಿಶೇಷ ಮತಗಟ್ಟೆಗಳನ್ನು ನಿಮಿರ್ಸಿ ಮತದಾರರನ್ನು ಸೆಳೆಯಲಾಗಿತ್ತು.
ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಸಹ "ನಮ್ಮ ನಡೆ ಮತಗಟ್ಟೆ ಕಡೆಗೆ' ಎಂಬ ವಿನೂತನ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಕ್ಷೇತ್ರಗಳಲ್ಲಿ ಹೆಚ್ಚಿನ ಮಹತ್ವ ನೀಡಿ ಕಾರ್ಯಕ್ರಮ ರೂಪಿಸಿ ಮತದಾನ ಹೆಚ್ಚಳಕ್ಕೆ ಪ್ರಯತ್ನಿಸಿದ್ದಾರೆ.
ಜಾಗೃತಿಯ ಝಲಕ್​: ಜಿಲ್ಲಾ ಸ್ವೀಪ್​ ಸಮಿತಿ ಜಿಲ್ಲೆಯ 8 ಮತಕ್ಷೇತ್ರಗಳಲ್ಲಿ ಬೀದಿ ನಾಟಕ, ಮನೆ ಮನೆ ಭೇಟಿ, ಜಿಂಗಲ್ಸ್​ ಪ್ರಸಾರ, ಬಿತ್ತಿ ಚಿತ್ರ, ಫಲಕಗಳ ಪ್ರದರ್ಶನ, ಬೈಕ್​ ರ್ಯಾಲಿ, ಹೂವಿನ ಅಲಂಕಾರ ಸ್ಪರ್ಧೆ, ರಂಗೋಲಿ, ಮೆಹಂದಿ ಸ್ಪರ್ಧೆ, ಸೆಲ್ಫೀ ಸ್ಟಾ$ಂಡ್​ ಅಳವಡಿಕೆ, ವಿದ್ಯಾಥಿರ್ಗಳಿಂದ ಪತ್ರ ಜಾಗೃತಿ, ಸೇರಿ ಇನ್ನೂ ಅನೇಕ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಿತ್ತು. ಇದರ ಜತೆಗೆ ಹು&ಧಾ ಅವಳಿನಗರದಲ್ಲಿ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ ಅವರು ಎಲ್ಲ ಠಾಣೆ ಅಧಿಕಾರಿ, ಸಿಬ್ಬಂದಿ ಜತೆಗೆ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲ ನಡೆಸಿ ತಪ್ಪದೇ ಮತದಾನ ಮಾಡಿ ಎಂಬ ಜಾಗೃತಿ ಮೂಡಿಸಿದ್ದರು. ಇದರಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.