ಜಿಲ್ಲೆ

ಡಾ.ಎಂ.ಎಸ್.ಚಲುವರಾಜು ಸ್ವೀಪ್ ಐಕಾನ್: ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಆದೇಶ

reportermys

ಮಂಡ್ಯ: ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆ(ಸ್ವೀಪ್) ಕಾರ್ಯಕ್ರಮಕ್ಕೆ ಜಿಲ್ಲಾ ಅಂಗವಿಕಲರ ಐಕಾನ್ ಆಗಿ ವಿಶೇಷಚೇತನ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಚಲುವರಾಜು ನೇಮಕಗೊಂಡಿದ್ದಾರೆ.

ಮಂಡ್ಯ ತಾಲೂಕು ಮಾರಗೌಡನಹಳ್ಳಿ ಗ್ರಾಮದ ಡಾ.ಎಂ.ಎಸ್.ಚಲುವರಾಜು, ರಾಜ್ಯಾದ್ಯಂತ ಅಂಗವಿಕಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಜತೆಗೆ ಅಂಗವಿಕಲರಿಗೆ ಸಂಬಂಧಿಸಿದ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದ ರಾಜ್ಯದ ಮೊದಲ ಅಂಗವಿಕಲ ವ್ಯಕ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಸಂಬಂಧ ಅವರನ್ನು ಜಿಲ್ಲಾ ರಾಯಭಾರಿಯಾಗಿ ರಾಜ್ಯ ಚುನಾವಣಾ ಆಯೊಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಪ್ರಭಾರ ಸಿಇಒ ಆಗಿದ್ದ ಶಾಂತಾ ಎಲ್.ಹುಲ್ಮನಿ ಅವರು ಡಾ.ಎಂ.ಎಸ್.ಚಲುವರಾಜು ನೇಮಕವನ್ನು ಅಧಿಕೃತಗೊಳಿಸಿದ್ದಾರೆ. ಜತೆಗೆ ಜಿಲ್ಲೆಯ ಅಂಗವಿಕಲ ಮತದಾರರು ಮತ್ತು ಯುವ/ಭವಿಷ್ಯದ ಮತದಾರರಲ್ಲಿ ಮತದಾನದ ಮಹತ್ವ ಹಾಗೂ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದ್ದಾರೆ.