ಹುಬ್ಬಳ್ಳಿ : ಭಾವಸಾರ ಕ್ಷತ್ರಿಯ ಸಮಾಜ ಟ್ರಸ್ಟ್ ಹುಬ್ಬಳ್ಳಿ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಳೇ ಹುಬ್ಬಳ್ಳಿ ಅರವಿಂದ ನಗರದ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಕಲ್ಯಾಣ ಮಂಟಪದಲ್ಲಿ ಬುಧವಾರ ಜರುಗಿತು.
ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಮಾಜಿ ಗವರ್ನರ್ ವಿಜಯ ಕುಮಾರ ಲಾಂಡೆ ಪ್ರತಿಜ್ಞಾ ವಿಧಿ ಭೋದಿಸಿದರು. ಟ್ರಸ್ಟ್ ಅಧ್ಯಕ್ಷರಾಗಿ ಕುಶಾಲ ಬೆದರೆ, ಕಾರ್ಯದರ್ಶಿಯಾಗಿ ಜಗದೀಶ ಹಂಚಾಟೆ, ಟ್ರಸ್ಟಿಗಳಾಗಿ ಅರುಣರಾವ್ ಬೆಳಂಕರ, ಗಣೇಶ ತೇಲಕರ, ದೀಪಕ ಮಾತಾಡೆ, ಕೆ.ಜಿ. ಟಿಕಾರೆ, ಸತೀಶರಾವ ವೈಕುಂಠೆ, ತುಕಾರಾಮ ಚುಟಕೆ, ದಯಾನಂದ, ಕಿಶೋರ ಮಾಳದಕರ, ಭವಾನೆಪ್ಪ ದಾಮೋದರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಅತಿಥಿಯಾಗಿದ್ದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜ್ಯಾಧ್ಯಕ್ಷ ಎನ್.ವಿ. ಶ್ರೀನಿವಾಸರಾವ ಪಿಸ್ಸೆ ಮಾತನಾಡಿ, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಕಾಂತರಾಜ್ ಜನಗಣತಿ ವರದಿಯಲ್ಲಿ ಭಾವಸಾರ ಜನಾಂಗಕ್ಕೆ ಅನ್ಯಾಯವಾಗಿದೆ. ಆಯೋಗದಿಂದ ಮತ್ತೆ ಜನಗಣತಿ ಮಾಡಿಸಬೇಕು. ಈಗ ಮಾಡಿದ ಗಣತಿ ಅತ್ಯಂತ ಅವೈಜ್ಞಾನಿಕವಾಗಿದೆ ಎಂದರು.
ಮಹಾಸಭಾದ ಉಪಾಧ್ಯಕ್ಷರಾದ ಡಾ.ಸುರೇಶ ಕಪಟಕರ, ಪ್ರಕಾಶ ಇಜಂತಕರ, ಕೆ.ಜಿ. ಟಿಕಾರೆ, ಎಂ.ಕೆ. ರಾಶಿನಕರ, ದತ್ತಾತ್ರೇಯ ಕುಂಠ, ಪ್ರಕಾಶ ತಿರುಮಲ್ಲೆ, ಶಂಕರ ಕುಂಠೆ, ರಾಮಕೃಷ್ಣ ಮಾಳ್ದಕರ್, ಭಾರತಿ ಸರ್ವದೆ ಮತ್ತು ಇತರರು ಹಾಜರಿದ್ದರು.