ಜಿಲ್ಲೆ

ಹುಬ್ಬಳ್ಳಿಯಲ್ಲಿ ಸ್ವಯಂವರ ಪಾರ್ವತಿ ಯಾಗ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಸೂಕ್ತ ಸಮಯದಲ್ಲಿ ವಿವಾಹ ಆಗುತ್ತಿಲ್ಲವೇ ? ಇಚ್ಛೆಯುಳ್ಳ ವರ ಅಥವಾ ವಧು ದೊರಕುತ್ತಿಲ್ಲವೇ ? ವಿವಾಹ ನಿಗದಿಯಾದರೂ ವಿವಿಧ ಅಡಚಣೆಗಳು ಅಡ್ಡಿಯಾಗುತ್ತಿವೆಯೇ ?

ಹಾಗಿದ್ದರೆ, ಇನ್ನೇಕೆ ತಡ ! ವಿವಾಹ ಸಂಬಂಧಿತ ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ಕನ್ನಡ ಮ್ಯಾಟ್ರಿಮೋನಿ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯ ಶ್ರೀ ಶಿವಮಂದಿರದಲ್ಲಿ ‘ಸ್ವಯಂವರ ಪಾರ್ವತಿ ಯಾಗ’ ವನ್ನು ಉಚಿತವಾಗಿ ಆಯೋಜಿಸಲಾಗುತ್ತಿದೆ.

ಈ ಸ್ವಯಂವರ ಪಾರ್ವತಿಯಾಗದಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮ ಇಚ್ಛೆಯ ಹಾಗೂ ಸೂಕ್ತವಾದ ಜೀವನ ಸಂಗಾತಿಯನ್ನು ಪಡೆದುಕೊಳ್ಳುವ ಸೌಭಾಗ್ಯ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ, ವಿವಾಹ ಸಂಬಂಧಿತ ಎಲ್ಲ ಅಡೆತಡೆಗಳು ಅಥವಾ ದೋಷಗಳು ಪರಿಹಾರ ಮಾಡಿಕೊಳ್ಳಬಹುದು. ಸುಖಮಯ ದಾಂಪತ್ಯ ಜೀವನದ ಆಶೀರ್ವಾದವೂ ಇದರಿಂದ ದೊರೆಯುತ್ತದೆ.

ಯಾಗದಲ್ಲಿ ಪಾಲ್ಗೊಂಡು ನಿಮ್ಮ ಪುತ್ರ ಅಥವಾ ಪುತ್ರಿಯ ಪರವಾಗಿ ಉಚಿತ ಸಂಕಲ್ಪ ಮತ್ತು ಪ್ರಸಾದದ ಸೌಲ್ಯಭ್ಯ ಪಡೆದುಕೊಳ್ಳಲು ಕನ್ನಡ ಮ್ಯಾಟ್ರಿಮೋನಿ ಮನವಿ ಮಾಡಿಕೊಳ್ಳುತ್ತದೆ.

ಈ ಅತ್ಯುತ್ತಮ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಲು ಹುಬ್ಬಳ್ಳಿ-ಧಾರವಾಡದ ಚಿಲ್ಲರೆ ಮಾರಾಟ ಅಂಗಡಿಗಳಿಗೆ ಭೇಟಿ ಕೊಡಿ ಮತ್ತು ಅರ್ಜಿ ನಮೂನೆಗಳನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಿ.

ಅರ್ಜಿ ನಮೂನೆಗಳಿಗಾಗಿ ಕನ್ನಡ ಮ್ಯಾಟ್ರಿಮೋನಿ ಸ್ಟೋರ್ ವಿಳಾಸ ಹುಬ್ಬಳ್ಳಿಯ ಶಕ್ತಿ ರಸ್ತೆ (ಕೋಯಿನ್ ರೋಡ್)ನ ಶಾರದಾ ಕಾಂಪ್ಲೆಕ್ಸ್​ನ ಮಳಿಗೆ ಸಂಖ್ಯೆ 3ರ 1ಸಿ, 2ಸಿ ಕಚೇರಿ ಅಥವಾ ಧಾರವಾಡ ಲೈನ್​ಬಜಾರ್​ನ ಮಾರುತಿ ದೇಗುಲ ಎದುರಿನ ಮಾರುತಿ ಕಾಂಪ್ಲೆಕ್ಸ್​ನ ಮಳಿಗೆ ಸಂಖ್ಯೆ 7 ಮತ್ತು 8ರಲ್ಲಿರುವ ಕಚೇರಿ ಸಂರ್ಪಸಬಹುದು. ವಿವರಗಳಿಗೆ ಮೋಬೈಲ್ ಸಂ: 75388 06555 ಸಂರ್ಪಸಿ, ಹೆಚ್ಚಿನ ವಿವರಗಳನ್ನು ಪಡೆಯಲು ಕೋರಲಾಗಿದೆ.