ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಾಹಗಳಿಗೆ ಎದುರಾಗಬಹುದಾದ ಅಡಚಣೆಗಳನ್ನು ನಿವಾರಿಸುವ ಉದ್ದೇಶದಿಂದ ಕನ್ನಡದ ನಂ. 1 ದಿನಪತ್ರಿಕೆ `ವಿಜಯವಾಣಿ' ಹಾಗೂ ಕನ್ನಡ ಮ್ಯಾಟ್ರಿಮೋನಿ ಸಂಯುಕ್ತ ಆಶ್ರಯದಲ್ಲಿ ನಗರದ ಯಾಲಕ್ಕಿ ಶೆಟ್ಟರ ಕಾಲನಿಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶುಕ್ರವಾರ ಸ್ವಯಂವರ ಪಾರ್ವತಿ ಯಾಗ ಆಯೋಜಿಸಲಾಗಿತ್ತು.
ಶ್ರೀಪಾದ ಭಟ್ ಪುರೋಹಿತ ಹಾಗೂ ಶ್ರೀಕಾಂತ ಭಟ್ ಪುರೋಹಿತ ಅವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ಸ್ವಯಂವರ ಪಾರ್ವತಿ ಯಾಗ ಧಾರ್ಮಿಕ ವಿಽವಿಧಾನಗಳಿಂದ ನೆರವೇರಿಸಲಾಯಿತು.
ಪುಣ್ಯಾಹವಾಚನೆ, ಹೃತ್ವಿಕವರ್ಣ ಗಣಪತಿ ಪೂಜೆ, ಪಂಚವಾಕ್ಯ ಪುಣ್ಯಾಹವಾಚನೆ, ದೇವತಾ ಸ್ಥಾಪನ, ಶಿವ ಪಾರ್ವತಿ ಸ್ಥಾಪನ ಮಾಡಿ ಹೋಮವನ್ನು ನೆರವೇರಿಸಲಾಯಿತು. ನಂತರ ಹೋಮದಲ್ಲಿ ಪಾಲ್ಗೊಂಡಿದ್ದ ಸಮಸ್ತ ಭಕ್ತರಿಗೆ ವೃತ್ವಿಜರು ಆಶೀರ್ವದಿಸಿದರು. ತಮ್ಮ ಪುತ್ರ ಅಥವಾ ಪುತ್ರಿಯ ಪರವಾಗಿ ಸಂಕಲ್ಪ ಮಾಡಿದ್ದ ಪಾಲಕರು ಮತ್ತು ಸೂಕ್ತ ಜೀವನ ಸಂಗಾತಿಯನ್ನು ಪಡೆದುಕೊಳ್ಳಲು ಅನೇಕರು ಯಾಗದಲ್ಲಿ ಪಾಲ್ಗೊಂಡು ಪುನೀತರಾದರು.