ಸುಂಟಿಕೊಪ್ಪದಲ್ಲಿ ಮಂಗಳವಾರ ಪುಷ್ಪಾಲಂಕೃತ ಮಂಟಪದಲ್ಲಿ ಸ್ವರ್ಣಗೌರಿ ಕುಳ್ಳಿರಿಸಿ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.  
ಜಿಲ್ಲೆ

ಸುಂಟಿಕೊಪ್ಪದಲ್ಲಿ ಸ್ವರ್ಣಗೌರಿ ಮೆರವಣಿಗೆ

Kodagu

ಸುಂಟಿಕೊಪ್ಪ: ಇಲ್ಲಿನ ರಾಮ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 58ನೇ ವರ್ಷದ ಸ್ವರ್ಣ ಗೌರಿ ಪ್ರತಿಷ್ಠಾಪನಾ ಕಾರ್ಯಕ್ರಮ ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ 8.30ಕ್ಕೆ ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗಂಗಾಜಲ ತರುವುದರೊಂದಿಗೆ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು. ನಂತರ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ಗೌರಮ್ಮನನ್ನು ಕುಳ್ಳಿರಿಸಿ ಭಜನಾ ಗೀತೆಗಳನ್ನು ಹಾಡುತ್ತಾ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಿ ರಾಮಂದಿರಕ್ಕೆ ಕರೆತರಲಾಯಿತು. ಮಧ್ಯಾಹ್ನ 12ಕ್ಕೆ ವಿಶೇಷ ಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಹಿರಿಯ ಅರ್ಚಕರಾದ ದರ್ಶನ ಭಟ್, ಮನೋಜ್ ಭಟ್ ಪೂಜೆ ನೆರವೇರಿಸಿದರು. ಸಮಿತಿ ಪದಾಧಿಕಾರಿಗಳು ದೇವಾಲಯವನ್ನು ವಿದ್ಯುತ್ ದೀಪ, ತಳಿರು ತೋರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಲಾಗಿತ್ತು.
ಸಮಿತಿ ಅಧ್ಯಕ್ಷ ವಿಘ್ನೇಶ್, ನಿಕಟಪೂರ್ವ ಅಧ್ಯಕ್ಷ ಬಿ.ಎಂ.ಸುರೇಶ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ವಾಸುದೇವ ಇತರರು ಇದ್ದರು.