ಬ್ರಹ್ಮಾವರ: ಬಾರಕೂರು ಮೂಡುಕೇರಿ ಸರಸ್ವತಿ ನಾರಾಯಣಿ ದೇವಸ್ಥಾನದಲ್ಲಿ ಶುಕ್ರವಾರ ದೇವಸ್ಥಾನದ ಮಹಿಳಾ ಸಂಘ ಸದಸ್ಯೆಯರಿಂದ ಗಣಪತಿ ಉಡುಪರ ಆಚಾರ್ಯತ್ವದಲ್ಲಿ ಭೂಷಣ್ ರೋಶನಿ ದಂಪತಿ ಸಂಕಲ್ಪ ಪೂಜೆಯಲ್ಲಿ ಸ್ವರ್ಣ ಗೌರಿ ವ್ರತ ಪೂಜೆ ಜರುಗಿತು.
ಮಹಿಳಾ ಸದಸ್ಯೆಯರಿಂದ ಭಜನೆ ಮತ್ತು ಸ್ತೋತ್ರ ನಡೆಯಿತು. ಮಂಡಲ ಮತ್ತು ಕಲಶದಲ್ಲಿ ಸ್ವರ್ಣ ಗೌರಿಯನ್ನು ಆವಾಹನೆ ಮಾಡಿ ಮಹಿಳೆಯರಿಂದ ಸಾಮೂಹಿಕವಾಗಿ ಅರ್ಚನೆ ಮತ್ತು ಪ್ರಾರ್ಥನೆ ನೆರವೇರಿತು. ಬಳಿಕ ಸುವಾಸಿನಿ ಪೂಜೆ, ವಾಯನ ಧಾನ, ಭಾಗಿನ ಸೇವೆ ಜರುಗಿತು. ದೇವಸ್ಥಾನ ಆಡಳಿತ ಮೊಕ್ತೇಸರ ಶಂಕರ ನಾಯಕ್, ಮಹಿಳಾ ಸಂಘದ ಮುಖ್ಯಸ್ಥೆ ಗೀತಾ ವಿಧುಶೇಖರ ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ಜರುಗಿತು.