ಜಿಲ್ಲೆ

ಜುಲೈ 7ರಂದು ಸ್ವರಾಲಯ ಸಾಂಸ್ಕೃತಿಕ ಹಬ್ಬ- 2024

ಮೈಸೂರು: ಸ್ವರಾಲಯ ಸಂಗೀತ ಸಂಸ್ಥೆಯಿಂದ ಜು.7ರಂದು ಸ್ವರಾಲಯ ಸಾಂಸ್ಕೃತಿಕ ಹಬ್ಬ- 2024 (ಭಾಗ-2) ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷೆ ಸುಮಾ ಹರಿನಾಥ್ ತಿಳಿಸಿದರು.
ಕುವೆಂಪುನಗರದ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ಅಂದು ಸಂಜೆ 4ಕ್ಕೆ ಕಾರ್ಯಕ್ರಮವನ್ನು ಸಂಗೀತ ಶಿಕ್ಷಕಿ ಆರ್.ಲಲಿತಾ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಸಂಗೀತ ಶಿಕ್ಷಕಿ ಸುಬ್ಬಲಕ್ಷ್ಮೀ, ವಿಜಯಲಕ್ಷ್ಮಿ ಭಾಗವಹಿಸುವರು. ನಾದ ವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಡ್ಯಾನ್ಸ್ ಸಂಸ್ಥೆ ಸ್ಥಾಪಕ ನವೀನ್ ಎಂ.ಎಸ್. ಅಂದಗಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾರದಾ ನೃತ್ಯ ಕಲಾ ಶಾಲೆಯ ವಿ.ಮಹೇಶ್ ಮತ್ತು ತಂಡದಿಂದ ನೃತ್ಯ ಸಂಭ್ರಮ, ಪದ್ಮಾ ನಿರ್ದೇಶನದಲ್ಲಿ ಬಿ.ಸುಕೃತಿ ಮತ್ತು ತಂಡದಿಂದ ದಾಸರ ಪದಗಳ ಗಾಯನ ನಡೆಯಲಿದೆ. ಆಸಕ್ತರು ಭಾಗವಹಿಸಬಹುದು ಎಂದು ಅವರು ತಿಳಿಸಿದರು. ಸಂಸ್ಥೆಯ ಉಪಾಧ್ಯಕ್ಷೆ ಜಯಶ್ರೀ ತೋಳ್ಪಾಡಿ, ಕಾರ್ಯದರ್ಶಿ ಎಚ್.ಎಸ್.ಶ್ರೀಕಾಂತಾಮಣಿ, ಖಜಾಂಣಿ ಶುಭಾ, ಗಣೇಶ್, ಸಂಚಾಲಕಿ ರೂಪಾ ನರಸಿಂಹನ್ ಇದ್ದರು.