ಜಿಲ್ಲೆ

ಸ್ವರಗಂಧರ್ವ ಯುವ ಸಂಗೀತೋತ್ಸವ

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತರತ್ನ ಪಂ. ಭೀಮಸೇನ ಜೋಶಿಯವರ 14ನೇ ಪುಣ್ಯಸ್ಮರಣೆ ಅಂಗವಾಗಿ ಭಾರತೀಯ ಸಂಗೀತ ವಿದ್ಯಾಲಯ ವತಿಯಿಂದ ನಗರದ ಸೃಜನಾ ರಂಗಮ0ದಿರದಲ್ಲಿ ಜ. 12ರಂದು ದಿನಪೂರ್ತಿ ಸ್ವರಗಂಧರ್ವ ಯುವ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ಸಂಗೀತ ವಿದ್ಯಾಲಯದ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.45ಕ್ಕೆ ವಿಶಾಲ ಹೆಗಡೆ ಹಾಗೂ ರಘುನಂದನ ಭಟ್ಟ ದ್ವಂದ್ವಗಾಯನದ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ಸಿಗಲಿದೆ. ನಂತರ ನವದೆಹಲಿಯ ಯುವ ಕಲಾವಿದ ಬಿಪುಲ್‌ಕುಮಾರ ರೇ ಅವರಿಂದ ಸಂತೂರ್ ವಾದನ, ಶ್ರೀಲಕ್ಷ್ಮೀ ಬೆಳ್ಳಣ್ಣು ಮತ್ತು ಶ್ರೇಯಾ ಮೂರ್ತಿ ದ್ವಂದ್ವ ಗಾಯನ, ಪುಣೆಯ ಅಭಿಷೇಕ ಬೋರಕರ ಅವರಿಂದ ಸರೋದ ವಾದನ, ನಂದಿನಿ ಶಂಕರ ಅವರಿಂದ ವಯೋಲಿನ್ ವಾದನ, ಬಳಿಕ ಲಾತೂರ್‌ನ ನಾಗೇಶ ಅಡಗಾಂವಕರ ಅವರ ಗಾನಸುಧೆ ಹರಿದುಬರಲಿದೆ.

ಪಂ. ರಾಜೇಂದ್ರ ನಾಕೋಡ, ರೂಪಕ ಕಲ್ಲೂರಕರ, ಶ್ರೀವತ್ಸ ಕೌಲಗಿ ತಬಲಾ ಹಾಗೂ ಸತೀಶ ಭಟ್ಟ ಮತ್ತು ಬಸವರಾಜ ಹಿರೇಮಠ ಹಾರ್ಮೋನಿಯಂದಲ್ಲಿ ಸಾಥ್ ನೀಡುವರು ಎಂದರು.