ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ, ಮಂಗಳೂರು ಆಶ್ರಯದಲ್ಲಿ ಮೇ 19 ರಂದು ಸಂಜೆ 5.30 ಕ್ಕೆ ಸ್ವರ ಸಂಧ್ಯಾ ಶಾಸ್ತ್ರೀಯ ಹಿಂದೂಸ್ತಾನೀ ಸಂಗೀತ ಜುಗಲ್ ಬಂಧಿ ಕಾರ್ಯಕ್ರಮ ನಗರದ ಅಲೋಶಿಯಸ್ ಕಾಲೇಜಿನ ಫಾದರ್ ಎಲ್‌ಎಫ್ ರಸ್ಕ್ವಿನ್ಹಾ ಹಾಲ್ (ಎಲ್‌ಸಿಆರ್‌ಐ ಬ್ಲಾಕ್) ನಲ್ಲಿ ನಡೆಯಲಿದೆ.
ಪೂರ್ವಾಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ದೆಹಲಿಯ ಖ್ಯಾತ ಪಿಟೀಲು ವಾದಕ ಪಂಡಿತ್ ಸಂತೋಷ್ ಕುಮಾರ್ ನಹರ್ ಅವರಿಂದ ವಯೋಲಿನ್ ಕಾರ್ಯಕ್ರಮ, ಉತ್ತರಾರ್ಧದಲ್ಲಿ ಶಿವಮೊಗ್ಗದ ನೌಶಾದ್ ಹರ್ಲಾಪುರ್ ಮತ್ತು ನಿಶಾದ್ ಹರ್ಲಾಪುರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಜುಗಲ್ ಬಂಧಿ ಗಾಯನ ನಡೆಯಲಿದೆ. ತಬ್ಲಾದಲ್ಲಿ ರಾಜೇಂದ್ರ ನಾಕೋಡ್, ಶ್ರೀಧರ್ ಭಟ್, ಗುರುರಾಜ್ ಅಡುಕಳ ಇವರು ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್.ನಾಯಕ್ ಅವರು ಕೋರಿದ್ದಾರೆ.