ಜಿಲ್ಲೆ

ಸ್ವರ ಸಾಮ್ರಾಟ ಸಂಗೀತ ಸಂಜೆ

Dharwada - Basavaraj Idli

ಹುಬ್ಬಳ್ಳಿ: ಕ್ಷಮತಾ ಮತ್ತು ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಗೌರವಾರ್ಥವಾಗಿ ಸ್ವರ ಸಾಮ್ರಾಟ ಸಂಗೀತ ಕಾರ್ಯಕ್ರಮವನ್ನು ಮಾ. 15ರಂದು ಸಂಜೆ 4.30ಕ್ಕೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಅಧ್ಯಕ್ಷ ಗೋವಿಂದ ಜೋಶಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ವಿವಿಧ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು ಎಂದರು.

ಮೇವಾತಿ ಕಿರಾಣಾ ಮತ್ತು ಗ್ವಾಲಿಯರ್ ಘರಾಣಾದ ದಿಗ್ಗಜ ಗಾಯಕರಾದ ಪಂ. ಸಂಜೀವ ಅಭ್ಯಂಕರ್, ಪಂ. ಕೈವಲ್ಯಕುಮಾರ ಮತ್ತು ಪದ್ಮಶ್ರೀ ವೆಂಕಟೇಶ ಕುಮಾರ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸುವರು ಎಂದರು.

ಸಹ ಕಲಾವಿದರಾದ ಶ್ರೀಧರ ಮಾಂಡ್ರೆ, ಕೇಶವ ಜೋಶಿ, ಗುರುಪ್ರಸಾದ ಹೆಗಡೆ, ಅಜಿಂಕ್ಯ ಜೋಶಿ, ಅಭಿಷೇಕ ಶಿಂಕರ ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.

ಗಂಗೂಬಾಯಿ ಸಂಗೀತ ವಿದ್ಯಾಲಯದ ಅಧ್ಯಕ್ಷೆ ವೈಷ್ಣವಿ ಹಾನಗಲ್, ಕಾರ್ಯದರ್ಶಿ ವಿನಯ ನಾಯಕ, ಮುರಳಿಧರ ಮಳಗಿ ಗೋಷ್ಠಿಯಲ್ಲಿದ್ದರು.