ಜಿಲ್ಲೆ

ವಿವೇಕಾನಂದ ಜೀವನ ಆದರ್ಶವಾಗಲಿ

Dharwada - Santosh Vaidya

ಹುಬ್ಬಳ್ಳಿ: ಉಣಕಲ್ಲನಲ್ಲಿರುವ ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್​ನಲ್ಲಿ ಶುಕ್ರವಾರ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಾಧ್ಯಾಪಕಿ ರಜನಿ ಪಾಟೀಲ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳಿಂದ ಎಲ್ಲವೂ ಸಾಧ್ಯ. ಮಕ್ಕಳು ತಮ್ಮಲ್ಲಿರುವ ಸೃಜನಾತ್ಮಕ ಗುಣಗಳನ್ನು ಹೊರ ತರಬೇಕು. ಅದಕ್ಕಾಗಿ ಹೆಚ್ಚು ಶ್ರಮ ಪಡಬೇಕು. ಸ್ವಾಮಿ ವಿವೇಕಾನಂದರ ಜೀವನ ನಮಗೆ ಆದರ್ಶವಾಗಬೇಕು ಎಂದರು.

ಪ್ರಭಾ ಎ. ಪ್ರಾರ್ಥನಾ ಗೀತೆ ಹಾಡಿದಳು. ಪೃಥ್ವಿ ಹಿರೇಮಠ ಹಾಗೂ ವಿಖ್ಯಾತ, ಸ್ವಾಮಿ ವಿವೇಕಾನಂದರು ಹಾಗೂ ರಾಮಕೃಷ್ಣ ಪರಮಹಂಸರ ಕುರಿತು ಭಾಷಣ ಮಾಡಿದರು. 7ನೇ ತರಗತಿಯ ವಿದ್ಯಾರ್ಥಿಗಳು ಪವರ್ ಆಫ್ ಯೂತ್ ಹಾಡಿಗೆ ನೃತ್ಯ ಮಾಡಿದರು. ಶ್ರೀರಕ್ಷಾ ಶೆಟ್ಟಿ ವಿವೇಕಾನಂದರ ಜೀವನ ಮತ್ತು ಅನುಭವಗಳನ್ನು ವಿವರಿಸಿದಳು. ಕೀರ್ತನಾ ನಾಗಾವಿ ವಂದಿಸಿದಳು.