ಜಿಲ್ಲೆ

ಜೈನಮುನಿ ಹತ್ಯೆ ಪ್ರಕರಣ; ಹಿಂದು ಸನಾತನ ಧರ್ಮಕ್ಕೆ ಆಘಾತ


 ಬೆಳಗಾವಿ:ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ ೧೦೮ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಹಿಂದು ಸನಾತನ ಧರ್ಮಕ್ಕೆ ಇದೊಂದು ದೊಡ್ಡ ಆಘಾತ ಉಂಟು ಮಾಡಿದೆ ಎಂದು ಅಖಿಲ ಭಾರತ ಸಂತ ಸಮೀತಿ ಅಧ್ಯಕ್ಷ  ವಿದ್ಯಾನಂದ ಸರಸ್ವತಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ ಮುನಿ ಹತ್ಯೆ ಪ್ರಕರಣ ಈಡಿ ಭಾರತ ದೇಶಕ್ಕೆ ದೊಟ್ಟ ದುಃಖವಾಗಿದೆ. ಇದು ಇಬ್ಬರಿಂದ ಆಗಿರುವ ಘಟನೆ ಅಲ್ಲಾ ಹಿಂದೆ ದೊಡ್ಡ ಕೈವಾಡ ಇರುವ ಶಂಕೆ ಇದೆ. ಸನಾತನ ಧರ್ಮ ಜೈನ ಮಠಗಳು ಮುಂದೆ ಬರಬಾರದು ಎನ್ನು ಉದ್ದೇಶದಿಂದ ಈ ರೀತಿ ಮಾಡಿರಬಹುದು ಹಾಗಾಗಿ ಇದನ್ನು ಸಿಬಿಐ ತನಿಖೆಗೆ ರಾಜ್ಯಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟçದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರದ ಅವಽಯಲ್ಲಿ ಒಬ್ಬ ಸನ್ಯಾಸಿಯನ್ನು ಸಹ ಹೊಡೆದು ಕೊಲ್ಲಲಾಗಿತ್ತು. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದೆ.ಸ್ವಾಮೀಜಿ ಹತ್ಯೆ ಬಳಿಕ ನಿರಂತರವಾಗಿ ೭ ಹಿಂದು ಕಾರ್ಯಕರ್ತರ ಹತ್ಯೆಯಾಗಿವೆ. ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದ ಮೇಲೆಯೇ ಯಾಕೆ ಇಷ್ಟೊಂದು ಹತ್ಯೆಯಾಯಿತು. ಈ ವಿಷಯ ಸಂಬAಧ ಅನಿಲ ಭಾರತ ಸಂತ ಸಮಿತಿಯಿಂದ ರಾಜ್ಯಪಾಲರನ್ನು ಭೇಟಿ ಆಗುತ್ತೇವೆ ಎಂದರು.