ಜಿಲ್ಲೆ

ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು.

ಎಬಿವಿಪಿ ವಿಭಾಗ ಸಂಚಾಲಕ ಸನತ್​ ತೋಟಿಗೇರ ಮಾತನಾಡಿ, ವಿವೇಕಾನಂದರ ಚಿಂತನೆಗಳು ಹಿಂದಿನ ದಿನಗಳಿಗಿಂತ ಇಂದಿನ ಪರಿಸ್ಥಿತಿಗೆ ಅತೀ ಹೆಚ್ಚು ಪ್ರಸ್ತುತ. ವಿವೇಕಾನಂದರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದಾ ಕಾಲ ರಾಷ್ಟ್ರ ಹಿತದ ಕೆಲಸ ಕಾರ್ಯವನ್ನು ಯುವಕರು ಮಾಡಿದಾಗಲೇ ಭಾರತ ವಿಶ್ವಗುರುವಾಗಲು ಸಾಧ್ಯ ಎಂದರು.

ಈರಪ್ಪ ಪತ್ತಾರ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ರಾಜು ಕಡೇಮನಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಂಚಾಲಕ ಅಯ್ಯನ ಗೌಡ, ಮುರಳೀಧರ್​ ಶೆಟ್ಟಿ, ಗುರು ಹಿರೇಮಠ, ಮನೋಹರ್​ ಶೆಟ್ಟಿ, ಉಲ್ಲಾಸ್​ ಗೋಡಿ, ಇತರರು ಇದ್ದರು.

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ವಿವೇಕಾನಂದರ ಜೀವನ ಕುರಿತು ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.