ಜಿಲ್ಲೆ

ಸ್ವಜಾತಿ ಬಂಧುಲೆನ ಸಮ್ಮಿಲನ-೨೦೨೩ ಫೆ.೨೫, ೨೬ರಂದು

ಮಡಿಕೇರಿ: ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಸ್ವಜಾತಿ ಬಂಧುಲೆನ ಸಮ್ಮಿಲನ-೨೦೨೩ ಕಾರ್ಯಕ್ರಮ ಫೆ.೨೫, ೨೬ರಂದು ಮೂರ್ನಾಡು ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಮೂರ್ನಾಡು ಹೋಬಳಿ ಬಂಟರ ಸಂಘದ ಕಾರ್ಯದರ್ಶಿ ಬಿ.ಬಿ.ಅಶ್ವತ್ಥ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫೆ.೨೫ರಂದು ಬೆಳಗ್ಗೆ ೯ ಗಂಟೆಗೆ ಮೂರ್ನಾಡು ಹೋಬಳಿ ಘಟಕ ಅಧ್ಯಕ್ಷ ಬಿ.ಕೆ.ಚಂದ್ರಶೇಖರ ರೈ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ.ಐತಪ್ಪ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಬಿ.ಕೆ.ರವೀಂದ್ರ ರೈ, ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ರಮೇಶ್ ರೈ, ಜಿಲ್ಲಾ ಖಜಾಂಚಿ ಬಿ.ಎನ್.ರತ್ನಾಕರ ರೈ, ಸಹ ಕಾರ್ಯದರ್ಶಿಗಳಾದ ಬಿ.ಸಿ.ಹರೀಶ್ ರೈ, ಇತರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.


ಫೆ.೨೬ರಂದು ಸಂಜೆ ೫ ಗಂಟೆಗೆ ಬಿ.ಕೆ.ಚಂದ್ರಶೇಖರ ರೈ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಬಿ.ಬಿ.ಐತಪ್ಪ ರೈ, ರವೀಂದ್ರ.ವಿ. ರೈ, ರವೀಂದ್ರ ರೈ.ಬಿ.ಕೆ., ಅಶ್ವಿನಿ ಪುರುಷೋತ್ತಮ ರೈ, ಜಯಂತಿ ರೈ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.


ವಿವಿಧ ಕಾರ್ಯಕ್ರಮ: ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್, ವಿವಿಧ ವಿಭಾಗದಲ್ಲಿ ಓಟ, ಕಾಲಿನ ನಡುವೆ ಬಲೂನ್ ಇಟ್ಟುಕೊಂಡು ಓಡುವ ಸ್ಪರ್ಧೆ ಸೇರಿದಂತೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಲಿದೆ. ಸಮಾರೋಪ ಸಮಾರಂಭದ ಬಳಿಕ ಮಸ್ಕಿರಿ ಕುಡ್ಲ ತಂಡದ ಕಾಮಿಡಿ ಕಚಗುಳಿ ಇರಲಿದೆ. ಖ್ಯಾತ ಕಲಾವಿದರಾದ ದೀಪಕ್ ರೈ ಪಾಣಾಜೆ, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ರಾಜೇಶ್ ಮುಗುಳಿ ಅಭಿನಯದ ನಾಟಕ ವಿಶೇಷ ಆಕರ್ಷಣೆಯಾಗಿರಲಿದೆ. ಜತೆಗೆ ಸಮಾಜದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.


ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಮಾಜದ ಸಾಧಕರನ್ನು ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಹೇಮಂತ್ ಶೆಟ್ಟಿ, ಬಾಬ ಅರುಣ್ ರೈ, ಬಿ.ಕೆ.ಸುರೇಶ್ ರೈ, ಸುಮತಿ ಶೆಟ್ಟಿ, ಜಿತೇಂದ್ರ ರೈ, ಜಯಂತಿ ಲವ ರೈ, ಕಿಶೋರ್ ರೈ ಕತ್ತಲೆಕಾಡು, ಪ್ರೇಮಲತಾ ಶೆಡ್ತಿ ಅವರನ್ನು ಸನ್ಮಾನಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ.