ಜಿಲ್ಲೆ

ಸ್ವಚ್ಛತೆಗೆ ಮೈಸೂರಿಗರ ಸ್ಪಂದನ

ಸದೇಶ್ ಕಾರ್ಮಾಡ್

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛ ಸರ್ವೇಕ್ಷಣೆ-2023 ಮುಕ್ತಾಯ ಹಂತದಲ್ಲಿದ್ದು, ಸ್ವಚ್ಛತೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಯಾವುದೇ ನಗರ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಿಟಿಜನ್ ಫೀಡ್‌ಬ್ಯಾಕ್ ತುಂಬಾ ಅವಶ್ಯಕ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಗುರಿ ಸಾಧನೆಯತ್ತ ಮುನ್ನಡೆಯುತ್ತಿದೆ.

2011ರ ಜನಸಂಖ್ಯೆ ವರದಿ ಪ್ರಕಾರ ನಗರದಲ್ಲಿ ಒಟ್ಟು 9.30 ಲಕ್ಷ ಜನಸಂಖ್ಯೆ ಇದ್ದು, ಈ ಪ್ರಕಾರ ನಗರದ 93 ಸಾವಿರ (ಶೇ.10) ಜನರು ಸ್ವಚ್ಛ ಸರ್ವೇಕ್ಷಣೆಯಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಬೇಕು. ಇದುವರೆಗೆ ಒಟ್ಟು ನಗರದ ಒಟ್ಟು 58.90 ಸಾವಿರ ಜನರು ಸಿಟಿಜನ್ ಫೀಡ್‌ಬ್ಯಾಕ್ ನೀಡಿದ್ದು, ನಗರ ಗುರಿ ಸಾಧನೆಯ ಸನಿಹಕ್ಕೆ ತಲುಪಿದೆ. ಸಿಟಿಜನ್ ಫೀಡ್‌ಬ್ಯಾಕ್ ಜುಲೈ 7 ರಿಂದ ಪ್ರಾರಂಭಗೊಂ ಡಿದ್ದು, ಆ.31 ರಂದು ಅಂತ್ಯಗೊಳ್ಳಲಿದೆ. ದೇಶದ ನಂ.1 ಸ್ವಚ್ಛ ನಗರಿ ಇಂದೋರ್ 2011ರ ಜನಗಣತಿ ಪ್ರಕಾರ 19.64 ಲಕ್ಷ ಜನಸಂಖ್ಯೆ ಹೊಂದಿದ್ದು, ಇದುವರೆಗೆ 1.77 ಲಕ್ಷ ಸಿಟಿಜನ್ ಫೀಡ್‌ಬ್ಯಾಕ್ ಪಡೆದುಕೊಂಡಿದೆ.

ಕಳೆದ ಬಾರಿ 2ನೇ ಸ್ವಚ್ಛ ನಗರಿ ಪ್ರಶಸ್ತಿ ಪಡೆದ ಗುಜರಾತ್‌ನ ಸೂರತ್ ನಗರ 45.91 ಲಕ್ಷ ಜನಸಂಖ್ಯೆ ಹೊಂದಿದ್ದು, ಇದುವರೆಗೆ ಕೇವಲ 24.44 ಸಾವಿರ ಸಿಟಿಜನ್ ಫೀಡ್‌ಬ್ಯಾಕ್ ಪಡೆದುಕೊಂಡಿದೆ. 3ನೇ ಸ್ಥಾನ ಪಡೆದುಕೊಂಡಿದ್ದ ಮಹಾರಾಷ್ಟ್ರದ ನವಿಮುಂಬೈ 1.24 ಕೋಟಿ ಜನಸಂಖ್ಯೆ ಹೊಂದಿದ್ದು, ಇದುವರೆಗೆ ಕೇವಲ 28 ಸಾವಿರ ಸಿಟಿಜನ್ ಫೀಡ್‌ಬ್ಯಾಕ್ ಮಾತ್ರ ಪಡೆದುಕೊಂಡಿದೆ. ಒಟ್ಟಾರೆ ಸಿಟಿಜನ್ ಫೀಡ್‌ಬ್ಯಾಕ್ ಪಡೆಯುವಲ್ಲಿ ನಗರ ಮುಂಚೂಣಿಯಲ್ಲಿದ್ದು, ನಿಗದಿ ಪಡಿಸಿದ ದಿನಾಂಕದೊಳಗೆ ಗುರಿ ಸಾಧನೆ ಮಾಡುವ ವಿಶ್ವಾಸ ಹೊಂದಿದೆ.

ಸ್ವಚ್ಛತೆ ಕುರಿತು ಜಾಗೃತಿ

ನಗರ ಪಾಲಿಕೆ ಅಧಿಕಾರಿಗಳ ತಂಡ ನಗರದ ಶಾಲಾ, ಕಾಲೇಜುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಕುರಿತು ಅರಿವು ಮೂಡಿಸಿ ಸ್ವಚ್ಛ ಸರ್ವೇಕ್ಷಣೆ ಕುರಿತು ಮಾಹಿತಿ ನೀಡಿ ಸಿಟಿಜನ್ ಫೀಡ್‌ಬ್ಯಾಕ್ ಪಡೆಯುತ್ತಿದ್ದಾರೆ. ಪ್ರತಿದಿನ 5 ಸಾವಿರ ಸಿಟಿಜನ್ ಫೀಡ್‌ಬ್ಯಾಕ್ ಪಡೆಯಲಾಗುತ್ತಿದೆ. ಸಿಟಿಜನ್ ಫೀಡ್‌ಬ್ಯಾಕ್ ಪಡೆಯುವ ನಿಟ್ಟಿನಲ್ಲಿ ಇತ್ತೀಚೆಗೆ ನಗರ ಪಾಲಿಕೆಯು ವಿವಿಧ ಸಂಘ ಸಂಸ್ಥೆಗಳ ಸಭೆ ನಡೆಸಿ ಸಹಕಾರ ಕೋರಿತ್ತು, ನಗರ ಪಾಲಿಕೆಯ ಮನವಿಗೆ ನಗರದ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸ್ವಚ್ಛ ಸರ್ವೇಕ್ಷಣೆಯ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅಥವಾ
ಠಿಠಿ://ಡಿಡಿಡಿ.ಞಜಟ.ಜ್ಞಿ/ಞಜಟಠ್ಠ್ಟಛಿ/ಡಿಚ್ಚಠ್ಠ್ಟಛಿಚ್ಞ2023/ ವೆಬ್‌ಸೈಟ್ ಮೂಲಕ ತಮ್ಮ ಅಭಿಪ್ರಾಯ ದಾಖಲಿಸಬಹುದು.

ಎಷ್ಟು ಅಂಕಗಳು?

ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಗೆ ಒಟ್ಟು 7,500 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ಈ ಬಾರಿ ಅಂಕಗಳನ್ನು 9,500ಕ್ಕೆ ಏರಿಕೆ ಮಾಡಲಾಗಿದೆ. ಕಳೆದ ಬಾರಿ ಸರ್ವೀಸ್ ಲೆವಲ್ ಪ್ರೋಗ್ರೆಸ್‌ಗೆ 3,000, ಸರ್ಟಿಫಿಕೇಷನ್‌ಗೆ 2,250, ಸಿಟಿಜನ್ ವಾಯ್ಸಗೆ 2,250 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ಈ ಬಾರಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕೆ ಒಟ್ಟು 4,525 (ಶೇ.48) ಅಂಕಗಳನ್ನು ನಿಗದಿ ಪಡಿಸಲಾಗಿದೆ. ಸರ್ಟಿಫಿಕೇಷನ್‌ಗೆ 2500, ಸಿಟಿಜನ್ ವಾಯ್ಸಗೆ 2,475 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸರ್ವಿಸ್ ಲೆವಲ್‌ಪ್ರೋಗ್ರೆಸ್‌ನಲ್ಲಿ ಮೈಸೂರು 2,452.02, ಇಂದೋರ್ 2,701.71, ಸಿಟಿಜನ್ ವಾಯ್ಸನಲ್ಲಿ ಮೈಸೂರು 2,064.41, ಇಂದೋರ್ 2,194.70 ಅಂಕಗಳನ್ನು ಪಡೆದುಕೊಂಡಿತ್ತು. ಸರ್ಟಿಫಿಕೇಷನ್‌ನಲ್ಲಿ ಮೈಸೂರು ಮತ್ತು ಇಂದೋರ್ ತಲಾ 2,250 ಅಂಕಗಳನ್ನು ಪಡೆದುಕೊಂಡಿತ್ತು.

ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದುವರೆಗೆ 58 ಸಾವಿರ ಜನರಿಂದ ಸಿಟಿಜನ್ ಫೀಡ್‌ಬ್ಯಾಕ್ ಪಡೆಯಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸಿಟಿಜನ್ ಫೀಡ್‌ಬ್ಯಾಕ್ ವಿಭಾಗದಲ್ಲಿ ಉತ್ತಮ ಸಾಧನೆ ತೋರಲಿ ದ್ದೇವೆ. ಆಗಸ್ಟ್ 31ರವರೆಗೆ ಸಿಟಿಜನ್‌ಫೀಡ್‌ಬ್ಯಾಕ್ ನೀಡಲು ಅವಕಾಶ ಇದ್ದು, ಪ್ರತಿದಿನ 5 ಸಾವಿರ ಜನರಿಂದ ಫೀಡ್‌ಬ್ಯಾಕ್ ಪಡೆಯಲಾಗುತ್ತಿದೆ. ಸ್ವಚ್ಛ ಸರ್ವೇಕ್ಷಣೆ ಮುಕ್ತಾಯ ಹಂತದಲ್ಲಿ ಇದ್ದು, ಸೆಪ್ಟೆಂಬರ್‌ನಲ್ಲಿ ಪ್ರಶಸ್ತಿ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಬಾರಿ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದೇವೆ.
ಡಾ.ಡಿ.ಜಿ.ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ