ಹುಬ್ಬಳ್ಳಿ: ನಗರದ ಅಕ್ಕ ಫೌಂಡೇಷನ್ ಟ್ರಸ್ಟ್ ಆಶ್ರಯದಲ್ಲಿ ಸ್ವಚ್ಛತಾ ಪಖ್ವಾಡ ಅಂಗವಾಗಿ ಸೆ. 29ರಂದು ಬೆಳಗ್ಗೆ 11.55ಕ್ಕೆ ಪವಿತ್ರ ಮತ್ತು ಪುರಾತನ ಶ್ರೀ ತುಳಜಾಭವಾನಿ ದೇವಸ್ಥಾನ ಬಳಿಯ ಸಹಸ್ರಾರ್ಜುನ ಸರ್ಕಲ್ ನಾಲಾ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಳೆಯಾದಾಗ ಕೊಳಚೆ ನೀರಿನಿಂದ ಆವೃತವಾಗುವ ಸರ್ಕಲ್ ಮತ್ತು ತುಳಜಾಭವಾನಿ ದೇವಸ್ಥಾನ, ದಾಜಿಬಾನಪೇಟವನ್ನು ಕಸ ಮುಕ್ತ ಮಾಡಬೇಕಾಗಿದೆ.
ಸ್ವಚ್ಛತಾ ಪಖ್ವಾಡ ಅಂಗವಾಗಿ ಅಕ್ಟೋಬರ್ 2ರ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಚಳವಳಿ ನಡೆಯಲಿದೆ. ಮಗಜಿಕೊಂಡಿ ಕಾಂಪ್ಲೆಕ್ಸ್ ನಿಂದ ಕಮರಿ-ಪೇಟವರೆಗೆ ನಾಲಾವನ್ನು ತ್ಯಾಜ್ಯ ಮುಕ್ತ ಮಾಡಲು ಸ್ಥಳಿಯ ಆಡಳಿತಕ್ಕೆ ಅಕ್ಟೋಬರ್ 7ರ ಗಡವು ನೀಡಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.