ಜಿಲ್ಲೆ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ

Mangaluru - Hariprasad Rai



ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಐದನೇ ತಿಂಗಳ ಶ್ರಮದಾನ ಭಾನುವಾರ ಬೆಳಗ್ಗೆ ಸ್ಟೇಟ್ ಬ್ಯಾಂಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣ ಪರಿಸರದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಂಆರ್‌ಪಿಎಲ್ ಸಂಸ್ಥೆಯ ಚೀಫ್ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್ ಮಾತನಾಡಿ ನಾವು ಇತರರ ಸೇವೆಗಾಗಿ ಜೀವಿಸುವುದೇ ನಿಜವಾದ ಜೀವನ. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನ ಅತ್ಯಂತ ಯಶಸ್ವಿ ಯೋಜನೆ ಎಂದರು.
ಕ್ರೈಡೈ ಮಂಗಳೂರು ಘಟಕದ ಅಧ್ಯಕ್ಷ ವಿನೋದ್ ಪಿಂಟೊ ಮಾತನಾಡಿ ಸ್ವಚ್ಛತಾ ಅಭಿಯಾನ ಪ್ರತೀ ಮನೆಯಿಂದ ಪ್ರಾರಂಭವಾಗಬೇಕು. ಈ ಕಾರ್ಯಕ್ರಮದ ಮೂಲಕ ಯುವಕರು ನಿಸ್ವಾರ್ಥ ಸೇವೆಯನ್ನು ಸಾಕಾರಗೊಳಿಸಲು ಸಾಧ್ಯವಿದೆ ಎಂದರು
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕ್ಯಾ. ಗಣೇಶ್ ಕಾರ್ಣಿಕ್ ಮತ್ತು ಡಾ. ಧನೇಶ್ ಕುಮಾರ್ ಉಪಸ್ಥಿತರಿದ್ದರು.
ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪುರುಷೋತ್ತಮ, ಡಾ. ನೇಹಾ ಶೆಟ್ಟಿ ಮತ್ತು ಡಾ. ನಿತ್ಯಾಲ್ ಕುಮಾರ್ ಅವರ
ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಅನಧಿಕೃತ ಬ್ಯಾನರ್ ಮತ್ತು ಕಸದ ರಾಶಿಗಳನ್ನು ತೆರವುಗೊಳಿಸಿದರು.
ಹಿರಿಯ ಸ್ವಯಂಸೇವಕರಾದ ವಿಠ್ಠಲ್‌ದಾಸ್ ಪ್ರಭು, ಮೆಹಬೂಬ್, ಅವಿನಾಶ್, ಸತ್ಯನಾರಾಯಣ.ಕೆ.ವಿ, ಶಿವರಾಂ, ಬಾಲಕೃಷ್ಣ ಭಟ್, ಅನಿರುಧ್ ನಾಯಕ್ ಅವರು ಫುಟ್‌ಪಾತ್ ಮತ್ತು ಒಳಚರಂಡಿಗಳಲ್ಲಿ ತುಂಬಿದ್ದ ಕಸದ ರಾಶಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಿದರು.
ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ತಾತ್ಕಾಲಿಕ ಶೆಲ್ಟರ್ ತೆರವುಗೊಳಿಸುವಲ್ಲಿ ಉಮಾನಾಥ್ ಕೋಟೆಕಾರ್, ವಸಂತಿ ನಾಯಕ್, ರಾಜೀವಿ ಚಂದ್ರಶೇಖರ, ಸುನಂದಾ ಶಿವರಾಂ, ನಾಗೇಶ್ ಸರಿಪಳ್ಳ, ಕಿರಣ್ ಫನಾರ್ಂಡಿಸ್, ತಾರಾನಾಥ್ ಆಳ್ವ ಸಹಕರಿಸಿದರು.
ಸಾರ್ವಜನಿಕ ಮೂತ್ರ ವಿಸರ್ಜನೆಯಿಂದಾಗಿ ಮಲಿನಗೊಂಡು ದುರ್ವಾಸನೆ ಬೀರುತ್ತಿದ್ದ ಸರ್ವೀಸ್ ಬಸ್ ನಿಲ್ದಾಣದ ಗೋಡೆಯನ್ನು ಟ್ಯಾಂಕರ್ ಮೂಲಕ ನೀರು ಹಾಯಿಸಿ ಸ್ವಚ್ಛಗೊಳಿಸಲು ಸೌರಜ್ ಮತ್ತು ಬಾಲಕೃಷ್ಣ ಭಟ್ ಶ್ರಮವಹಿಸಿದರು.
ಸ್ವಯಂ ಸೇವಕರಾದ ಕಮಲಾಕ್ಷ ಪೈ, ಡಾ. ಸದಾನಂದ, ಮುಕೇಶ್‌ಆಳ್ವ, ಡಾ. ತನಿಷ್ಕ್, ಬಬಿತಾ ಶೆಟ್ಟಿ, ಪ್ರಕಾಶ್ ಎಸ್. ಟಿ., ಶಾಯಿಲ್, ಕೇದಾರ್, ನೈತಿಕ್ ಶೆಟ್ಟಿ ಹಾಗೂ ಎ. ಜೆ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛಗೊಂಡ ಗೋಡೆಗೆ ಬಣ್ಣ ಬಳಿದರು.
ನಗರದ ನಿಟ್ಟೆ ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ್ದ ಫಿಲಿಪೈನ್ಸ್ ದೇಶದ ಯೂನಿವರ್ಸಿಟಿ ಆಫ್ ಸ್ಯಾಂಟೊ ತೋಮಸ್‌ನ ಪ್ರೊ.ಚಾರ್ಲ್ನೆಸ್ ನೆರ್ಮಲ್
ಮತ್ತು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.