ಜಿಲ್ಲೆ

ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

ಪಂಕಜ ಕೆ.ಎಂ.

ಬೆಂಗಳೂರು: ಸ್ವಾಭಿಮಾನಿ ಕರ್ನಾಟಕ ವೇದಿಕೆ ನೀಡುವ 2023ನೇ ಸಾಲಿನ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ವಿವಿಧ ಪ್ರಕಾರಗಳ ಆರು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 5 ಸಾವಿರ ರೂ. ನಗದು ಒಳಗೊಂಡಿದೆ.

ಎಚ್.ಎಸ್.ಎಂ. ಪ್ರಕಾಶ್ ಅವರ ‘ನಮ್ಮಂಥ ಬಲ್ಲಿದವರು’ (ಅನುವಾದ), ಎಚ್.ಟಿ. ಪೋತೆ ಅವರ ‘ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ’ (ಪ್ರವಾಸ ಕಥನ), ಫಾತಿಮಾ ರಲಿಯಾ ಅವರ ‘ಒಡೆಯಲಾರದೆ ಒಡಪು’ (ಕಥಾ ಸಂಕಲನ), ಸಂತೋಷ ನಾಯಕ ಅವರ ‘ಹೊಸ ವಿಳಾಸದ ಹೆಜ್ಜೆಗಳು’ (ಕವನ ಸಂಕಲನ), ಇಂದಿರಾ ಕೃಷ್ಣಪ್ಪ ಅವರ ‘ಸಾವಿತ್ರಿ ಬಾ ಪುಲೆ’ (ವ್ಯಕ್ತಿ ಚಿತ್ರಣ) ಹಾಗೂ ಎಂ.ಎಸ್. ಮಣಿ ಅವರ ‘ಗವಿಮಾರ್ಗ’ (ಲೇಖನ ಸಂಕಲನ) ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

31ರಂದು ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ತಿಳಿಸಿದ್ದಾರೆ.