ಜಿಲ್ಲೆ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9ರಿಂದ 20ರವರೆಗೆ ಚಳಿಗಾಲ ಅಧಿವೇಶನ!

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಈ ಬಾರಿ ಚಳಿಗಾಲ ಅಧಿವೇಶನ ಡಿಸೆಂಬರ್ 9ರಿಂದ 20ರವರೆಗೆ ನಡೆಯುವ ಸಾಧ್ಯತೆಯಿದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಸರ್ಕಾರವೇ ಅಧಿಕೃತ ವಾಗಿ ಪ್ರಕಟಿಸಲಿದೆ ಎಂದು ಪರಿಷತ್‌ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಅಧಿವೇಶನ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಡಿಸೆಂಬರ್ 9ರಿಂದ 20ರ ವರೆಗೆ ನಡೆಯಬಹುದು.

ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಲಾಗಿದೆ.

ಕಳೆದ ವರ್ಷದ ಸಣ್ಣಪುಟ್ಟ ಸಮಸ್ಯೆಗೆ ಇತ್ಯರ್ಥ ಪಡಿಸುತ್ತೇವೆ.

ಬೆಳಗಾವಿ ಅಧಿವೇಶವನ್ನು ಉತ್ತಮ ರೀತಿಯಲ್ಲಿ ನಡೆಸಲು ಚರ್ಚೆ.

ಸಭೆಯಲ್ಲಿ ಆಗೋ ಚರ್ಚೆ ಜಾರಿಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಸ್ಪೀಕರ್ ಯು ಟಿ ಖಾದರ್ ಮಾತನಾಡಿ,ಚಳಿಗಾಲದ ಅಧಿವೇಶನದ ಅಧಿಕೃತ ದಿನಾಂಕವನ್ನು ಸರ್ಕಾರ ಪ್ರಕಟ ಮಾಡಲಿದೆ.ಸಿದ್ದತೆ ಮಾಡಲು ನಾವು ಅಧಿಕಾರಗಳಿಗೆ ಸೂಚನೆ ನೀಡಿದ್ದೇವೆ.ಅಧಿವೇಶನ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ.ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿವೇಶನ ಸಿದ್ಧತೆ ಮಾಡಲಿದೆ.

ಎಲ್ಲರೂ ಟೀಂ ವರ್ಕ್ ಆಗಿ ಕೆಲಸ ಮಾಡಲು ಸೂಚನೆ.

ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆಗೆ ಸಮಯ ಮೀಸಲು ಇಡುತ್ತೇವೆ.

ಕಳೆದ ಬಾರಿಯೂ ಇದಕ್ಕೆ ನಾಲ್ಕು ದಿನಕ್ಕೆ ಅವಕಾಶ ನೀಡಲಾಗಿದೆ.

ಅಧಿವೇಶನ ನೋಡಲು ಎಲ್ಲ ವರ್ಗದ ಜನರಿಗೆ ಅವಕಾಶ.

ಸಲುಭದಲ್ಲಿ ಪಾಸ್ ಎಲ್ಲರಿಗೂ ಸಿಗಬೇಕು ಎಂಬುದು ನಮ್ನ ಪ್ರಯತ್ನ.ಶಾಲೆ, ಕಾಲೇಜಿನ ಮಕ್ಕಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎಂದರು.

ಕಾಂಗ್ರೆಸ್ ಅಧಿವೇಶನ ನೂರು ವರ್ಷದ ಕಾರ್ಯಕ್ರಮ ಈ ವರ್ಷ.

ಕಿತ್ತೂರು ವಿಜಯೋತ್ಸವ 200ನೇ ವರ್ಷಚಾರಣೆ ಹಿನ್ನಲೆ‌.

ಅಧಿವೇಶಕ್ಕೆ ಬರುವ ಮಕ್ಕಳಿಗೆ ತಿಳಿಸಲು ನಿರ್ಧಾರ ಮಾಡಲಾಗಿದೆ.

ಸುವರ್ಣ ಸೌಧದಲ್ಲಿ ಗಾಂಧಿ ಪ್ರತಿಮೆ ಈ ವರ್ಷ ಸ್ಥಾಪನೆ ಆಗಲಿದೆ.

ಜೊತೆಗೆ ಸತ್ಯಮೇವ ಜಯತೇಯನ್ನು ಬರೆಸಲು ಸೂಚನೆ.

ಕಾನೂನು ಅನುಸಾರು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಶಾಸಕ ಆಸಿಫ್ ಸೇಠ್, ಡಿಸಿ ಮೊಹಮ್ಮದ್ ರೋಷನ್‌, ಜಿಪಂ ಸಿಇಒ ರಾಹುಲ ಶಿಂಧೆ, ಎಸ್ ಪಿ ಡಾ. ಭೀಮಾಶಂಕರ ಗುಳೇದ ಇತರರಿದ್ದರು.