ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಅವರು ಎಸ್ಸೆಸ್ಸೆಲ್ಸಿ ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಸಮೃದ್ಧಿ, ಮತ್ತು ಅವರ ತಾಯಿ ಶಿಲ್ಪಾ ಹಾಗೂ ಲೊಯೋಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್​ ರೇನಿಟಾ ಅವರನ್ನು ಸನ್ಮಾನಿಸಿದರು. ವಿ. ವಿ. ನಡವಿನಮನಿ, ಅರವಿಂದ ಹುಲ್ಲೂರ ಇತರರು ಇದ್ದರು 
ಜಿಲ್ಲೆ

ವಿದ್ಯೆ ಯಾರೋಬ್ಬರ ಸ್ವತ್ತಲ್ಲ, ಜಾತಿಗೂ ಸೀಮಿತ ಅಲ್ಲ: ಎಸ್​.ವಿ. ಸಂಕನೂರು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದು ಯಾರೊಬ್ಬರ ಸ್ವತ್ತಲ್ಲ ಹಾಗೂ ಯಾವ ಜಾತಿಗೂ ಸೀಮಿತ ಅಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಹೇಳಿದರು.
ಎಸ್ಸೆಸ್ಸಲಿ ಪರೀೆಯಲ್ಲಿ ಗದಗ ಜಿಲ್ಲೆಗೆ 625 ಕ್ಕೆ 622 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದ ಸಮೃದ್ಧಿ ಶ್ರೀಧರ ಸಿದ್ಲಿಂಗ ವಿದ್ಯಾಥಿರ್ ಮನೆಗೆ ಶನಿವಾರ ಭೇಟಿ ನೀಡಿ ಸನ್ಮಾನಿಸಿ ಮಾತನಾಡಿದರು.
ಶಿಕ್ಷಣ ಎಂಬುದು ಉತ್ತಮ ನಾಗರಿಕತೆ ಬೆಳೆಯಲು ಮೂಲಕ ಆರಣ, ಜ್ಞಾ ನತ್ತು ವಿಕಾಸದತ್ತ ಮನುಷ್ಯರನ್ನು ಶಿಕ್ಷಣ ಕೊಂಡೊಯ್ಯುತ್ತದೆ. ಎಲ್ಲರೂ ಶಿಕ್ಷಣ ಪಡೆಯಬೇಕು ಮತ್ತು ಶಿಕ್ಷಣ ಎಂಬುದು ಮೂಲಭುತ ಹಕ್ಕುಗಳಲ್ಲಿ ಮಹತ್ವದ ಹಕ್ಕಾಗಿದೆ. ಶಿಕ್ಷಣ ವಲಯಕ್ಕೆ ಸಹಕಾರ ಮಾಡಲು ಸಧಾ ಸಿದ್ಧನಿರುತ್ತೇನೆ ಎಂದು ಸಂಕನೂರು ಹೇಳಿದರು.
ವಿದ್ಯಾಥಿರ್ ಸಮೃದ್ಧಿ ಸಿದ್ಲಿಂಗ ಮಾತನಾಡಿ, ಕಾನೂನು ಶಿಣ ಅಭ್ಯಾಸ ಮಾಡಿ ಉಚ್ಚ ನ್ಯಾಯಾಲಯ ನ್ಯಾಯಾಧೀಶೆ ಆಗುವ ಗುರಿಯನ್ನು ಹೊಂದಿರುವುದಾಗಿ ಹೇಳಿದಳು.
ಜಿಲ್ಲಾ ಉಪನಿರ್ದೇಶಕ ಎಂ. ಎ. ರೆಡ್ಡೇರ ಮಾತನಾಡಿ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಗದಗ ಜಿಲ್ಲೆಯು ರಾಜ್ಯದಲ್ಲಿ 25ನೇ ಸ್ಥಾನದಲ್ಲಿ ಇತ್ತು. ಈ ಬಾರಿ 17ನೇ ಸ್ಥಾನಕ್ಕೆ ಬಂದಿರುವುದು ಸಂತೋಷದ ವಿಷಯ. ಈ ಸಾಧನೆಗೆ ಕಾರಣಿಕರ್ತರಾದ ಜಿಲ್ಲೆಯ ಎಲ್ಲ ಸಹಶಿಕರು ಹಾಗೂ ಮುಖ್ಯೋಪಾಧ್ಯಾಯರನ್ನು ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯನ್ನು ಹತ್ತನೇ ಸ್ಥಾನಕ್ಕೆ ತರುವಲ್ಲಿ ಈಗಿನಿಂದಲೇ ಯೋಜನೆಯನ್ನು ರೂಪಿಸುವುದಾಗಿ ಹೇಳಿದರು.
ಶಹರ ೇತ್ರ ಶಿಣಾಧಿಕಾರಿ ಆರ್​. ಎಸ್​. ಬುರುಡಿ, ಪಿ.ಎಚ್​. ಕಡಿವಾಳ, ಬಿ.ಎ್​. ಪೂಜಾರ, ಗ್ರಾಮೀಣ ೇತ್ರ ಶಿಣಾಧಿಕಾರಿ ವಿ. ವಿ. ನಡವಿನಮನಿ, ಅರವಿಂದ ಹುಲ್ಲೂರ ಇತರರು ಇದ್ದರು.


.