ಶಿಕ್ಷಣ ಇಲಾಖೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ನಯಗಳನ್ನು ವಿರೋಧಿಸಿ ಎಸ್​.ವಿ. ಸಂಕನೂರು ಸುದ್ದಿಗೋಷ್ಟಿ ನಡೆಸಿದರು. ಜಯದೇವ ಮೆಣಸಿಗಿ, ಪುನೀತ ಬೆಣಕನವಾರಿ, ರವಿ ನರೇಗಲ್​, ಹನುಮಂತ ಹಳ್ಳೂರು, ಶಿವು ಜೋಗಿನ, ವಿನಾಐಕ ಹಬೀಬ, ಸೋಮಶೇಖರ ಪಾಟೀಲ ಇತರರು ಇದ್ದರು. 
ಜಿಲ್ಲೆ

ಶಿಕ್ಷಣ ಕ್ಷೇತ್ರದಲ್ಲಿ ಕಾಂಗ್ರೆಸ್​ ಸರ್ಕಾರದ ಆತುರದ ನಿರ್ಣಯ: ಎಸ್​.ವಿ. ಸಂಕನೂರು

ಶೈಕ್ಷಣಿಕ ವಲಯ ಹಾಳು ಮಾಡಿದ ಕಾಂಗ್ರೆಸ್​: ಎಸ್​.ವಿ. ಸಂಕನೂರು

ವಿಜಯವಾಣಿ ಸುದ್ದಿಜಾಲ ಗದಗ
ಶಿಕ್ಷಣ ಇಲಾಖೆಯಲ್ಲಿ ಸಚಿವರು ತೆಗೆದುಕೊಂಡಿರುವ ಹಲವು ತಪ್ಪು ನಿರ್ಣಯಗಳಿಂದ ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆ ಸಂರ್ಪೂಣ ಹಾಳಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಇದ್ದ ಶಾಲಾ ಪಠ್ಯಕ್ರಮ ಬದಲಾವಣೆ ಮಾಡುವ ನಿರ್ಣಯವನ್ನು ಕಾಂಗ್ರೆಸ್​ ಸರ್ಕಾರ ತೆಗೆದುಕೊಂಡಿದೆ. ಇದು ದ್ವೇಷಧ ರಾಜಕಾರಣವಲ್ಲದೇ ಬೇರೇನೂ ಎಂದು ಪ್ರಶ್ನಿಸಿದರು. 6 ರಿಂದ 10 ನೇ ತರಗತಿಗೆ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಈ ಹಿಂದೆ ಇದ್ದ 9 ಪಾಠಗಳನ್ನು ತೆಗೆದು ಹಾಕುವ ನಿರ್ಣಯವನ್ನು ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಣಯಿಸಿರುವುದು ದುರ್ದೈವದ ವಿಷಯ. ಈ ನಿರ್ಣಯದಂತೆ ತರಾತುರಿಯಲ್ಲಿ ಪಾಠಗಳನ್ನು ಬದಲಾವಣೆಗೊಳಿಸಿ ಕರ್ನಾಟಕ ಪಠ್ಯ ಪುಸ್ತಕ ಸಂಘದ ವತಿಯಿಂದ ಮುದ್ರಣ ಮಾಡಿಸಿ ಶಿಕ್ಷಕರಿಗೆ ಮಾತ್ರ ವಿತರಿಸಲಾಗಿದೆ. ಆದರೆ ವಿದ್ಯಾಥಿರ್ಗಳಿಗೆ ಇನ್ನೂ ಪಠ್ಯಪುಸ್ತಕ ತಲುಪಿಲ್ಲ. ಸರ್ಕಾರ ಆತುರದ ನಿರ್ಣಯ ಕೈಗೊಂಡ ಹಿನ್ನೆಲೆ ಶೈಕ್ಷಣ ವಲಯದಲ್ಲಿ ಶಿಕ್ಷಕರು, ವಿದ್ಯಾಥಿರ್ಗಳು ಗೊಂದಲದಲ್ಲಿ ಇದ್ದಾರೆ ಎಂದು ಆರೋಪಿಸಿದರು.
ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್​ ನೇತೃತ್ವದ ಸಮಿತಿ ವೈಜ್ಞಾನಿಕವಾಗಿ ಸಿದ್ದಪಡಿಸಿದ ವರದಿಯನ್ನು, ಸರಿಯಾಗಿ ಅರ್ಥೈಸಿಕೊಳ್ಳದೇ ರಾಜ್ಯ ಸರ್ಕಾರ ತಿರಸ್ಕರಿಸಿದೆ. ಎನ್​ಇಪಿ ರದ್ದುಪಡಿಸಿದ ಪ್ರಕ್ರಿಯೆ ಕೂ ರಾಜಕೀಯ ಪ್ರೇರಿತವಾಗಿದೆ ಎಂದು ಎಸ್​.ವಿ. ಸಂಕನೂರು ಆರೋಪಿಸಿರು

ಮೂರು ಪರೀಕ್ಷೆ, ತಪ್ಪು ನಿರ್ಧಾರ:
ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಅವಧಿಯಲ್ಲಿ ಮೂರು ಪರೀಕ್ಷೆಗಳನ್ನು ನಡೆಸುವ ತಪ್ಪು ನಿರ್ಧಾರ ಕೈಗೊಂಡಿರುವ ಕುರಿತು ಕಿಡಿಕಾರಿದ ಸಂಕನುರು, ವಿದ್ಯಾಥಿರ್ಗಳು ಮತ್ತು ಪಾಲಕರ ಬೇಡಿಕೆ ಇಲ್ಲದೇ ಮೂರು ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಏನಿತ್ತು? ಈ ಬಗ್ಗೆ ಶಿಕ್ಷಣ ಇಲಾಖೆ ಕೂಡ ಸರ್ಕಾರಕ್ಕೆ ಶಿಪಾರಸ್ಸು ಮಾಡಿಲ್ಲ. ಮೂರು ಪರೀಕ್ಷೆಗಳನ್ನು ನಡೆಸುವ ನಿರ್ಣಯದಿಂದ ವಿದ್ಯಾಥಿರ್ಗಳಲ್ಲಿ ಪರೀಕ್ಷೆ ಬಗ್ಗೆ ಗಂಭೀರತೆ ಉಳಿಯುವುದಿಲ್ಲ. ಪರೀಕ್ಷೆಯ ಘನತೆಯೂ ಉಳಿಯುವುದಿಲ್ಲ. ಈ ಪರಿೆ ಪ್ರಕ್ರಿಯೆಯೂ ಜುಲೈ ಕೊನೆಯ ವಾರದ ವರೆಗೆ ನಡೆಯುವುದರಿಂದ ಮೂರನೇ ಪರೀಕ್ಷೆಯಲ್ಲಿ ಪಾಸಾದ ವಿದ್ಯಾಥಿರ್ಗಳು ಮುಂದಿನ ತರಗತಿಗೆ ಆಗಸ್ಟ್​ ತಿಂಗಳಲ್ಲಿ ಪ್ರವೇಶ ಪಡೆಯುತ್ತಾನೆ. ಇದರಿಂದ ಮುಂದಿನ ತರಗತಿಯಲ್ಲಿ ಜೂನ್​, ಜುಲೈ ತಿಂಗಳ ಬೋಧನೆಯಿಂದ ವಂಚಿತರಾಗುತ್ತಾರೆ. ಪರೀಾ ಕಾರಣದಿಂದ ಶಿಕ್ಷಕರಿಗೆ ರೆಗ್ಯುಲರ್​ ವಿದ್ಯಾಥಿರ್ಗಳಿಗೆ ಬೋಧನೆ ಮಾಡಲು ತೊಂದರೆ ಆಗುತ್ತದೆ ಎಂದರು. ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಸರ್ಕಾರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಗೆ ಮೂರು ಪರೀಕ್ಷೆಗಳನ್ನು ನಡೆಸದೇ ಮೊದಲಿನ ಹಾಗೆ ಎರಡು ಪರೀಕ್ಷೆಗಳನ್ನು ನಡೆಸಲು ತೀರ್ಮಾನ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದರು.

ಕೃಂಪಾಕ ಅಂಕ:
ಪರೀಾ ಕೊಠಡಿಯಲ್ಲಿ ವೆಬ್​ ಕಾಸ್ಟಿಂಗ್​ ವಿಧಾನದಿಂದ ವಿದ್ಯಾಥಿರ್ಗಳು ಭಯಭೀತರಾಗಿ ಮತ್ತು ಇತರೆ ಕಾರಣಗಳಿಂದ 2024 ರ ಪರೀಕ್ಷಾ ಫಲಿತಾಂಶ ಶೇ. 43 ಮಾತ್ರ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಅವಮಾನ ಆಗುತ್ತದೆದೆ ಮತ್ತು ಪಾಲಕರು ಹಾಗೂ ವಿದ್ಯಾಥಿರ್ಗಳು ಸರ್ಕಾರದ ಮೇಲೆ ಹಲವಾರು ರೀತಿಯಲ್ಲಿ ಟೀಕೆ, ಪ್ರಶ್ನೆಗಳನ್ನು ಮಾಡುತ್ತಾರೆ ಎಂಬ ಕಾರಣದಿಂದ ಅನುತ್ತೀರ್ಣರಾದ ವಿದ್ಯಾಥಿರ್ಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೃಪಾಂಕಗಳನ್ನು ನೀಡಿ ಪರೀಕ್ಷೆ ಫಲಿತಾಂಶವನ್ನು ಶೇ. 43 ರಿಂದ 73.40 ಹೆಚ್ಚಿಸಲಾಗಿದೆ. ಪರೀಕ್ಷೆ ಫಲಿತಾಶಂಶವನ್ನು ಹೆಚ್ಚಿಸಲು ಕೃಪಾಂಕ ಅಂಕಗಳನ್ನು ನೀಡಲು ಕನಿಷ್ಠ 3- ಅಥವಾ 4 ವಿಷಯಗಳಲ್ಲಿ 35 ಅಂಕ ಪಡೆದಿರಬೇಕು ಎಂಬ ನಿಯಮವನ್ನು ಸಡಿಲಿಸಿ 25ಕ್ಕೆ ಇಳಿಸಲಾಗಿದೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಜಯದೇವ ಮೆಣಸಿಗಿ, ಪುನೀತ ಬೆಣಕನವಾರಿ, ರವಿ ನರೇಗಲ್​, ಹನುಮಂತ ಹಳ್ಳೂರು, ಶಿವು ಜೋಗಿನ, ವಿನಾಐಕ ಹಬೀಬ, ಸೋಮಶೇಖರ ಪಾಟೀಲ ಇತರರು ಇದ್ದರು.