ಕನಕಗಿರಿಯ ಸುವರ್ಣಗಿರಿ ವಿರಕ್ತಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರವನ್ನು ಸುವರ್ಣಗಿರಿ ವಿರಕ್ತಮಠದ ಡಾ. ಚನ್ನಮಲ ್ಲಸ್ವಾಮೀಜಿ ಉದ್ಘಾಟಿಸಿದರು. ಪ್ರಮುಖರಾದ ಗಂಗಾಧರ ಸ್ವಾಮಿ ಕಲುಬಾಗಿಲಮಠ, ವೀರೇಶ ಸಮಗಂಡಿ, ರವಿಶಂಕರ್ ಪಾಟೀಲ್, ಶರಣೇಗೌಡ, ರಾಜಾಸಾಬ್, ಕೆ.ಎಚ್.ಕುಲಕರ್ಣಿ, ನಾಗೇಶಪ್ಪ ರೊಟ್ಟಿ, ಜನಜಾಗೃತಿ ವೇದಿಕೆ ಸದಸ್ಯ ಸಿದ್ದಣ್ಣ ಜಕಲಿ ಇತರರಿದ್ದರು. 
ಜಿಲ್ಲೆ

ಮದ್ಯ ಸೇವನೆಯಿಂದ ಅಪಘಾತಗಳು ಹೆಚ್ಚಳ

ಕನಕಗಿರಿ: ಯುವ ಸಮೂಹ ದುಶ್ಚಟಗಳಿಗೆ ದಾಸರಾಗದೆ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದು ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ಯುವ ಸಮೂಹ ದುಶ್ಚಟಗಳಿಗೆ ಬಲಿ

ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ 1713 ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗಿ ಹಣದ ಜತೆಗೆ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಇಳಕಲ್ಲ ಮಹಾಂತ ಸ್ವಾಮೀಜಿ ಹಾಗೂ ತಾವು ಜೋಳಿಗೆ ಹಿಡಿದು ದುಶ್ಚಟಗಳನ್ನು ಬೇಡಿದ್ದೇವೆ ಎಂದರು.

ಮದ್ಯ ಸೇವಿಸುವುದನ್ನು ಬಿಡಿಸಲು ಶಿಬಿರ ಆಯೋಜಿಸಿರುವುದು ಶ್ಲಾಘನೀಯ

ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ, ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಮಡದಿ, ಮಕ್ಕಳು ಬೀದಿ ಪಾಲಾಗುತ್ತಿದ್ದಾರೆ. ಮದ್ಯ ಸೇವಿಸುವುದನ್ನು ಬಿಡಿಸಲು ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ಜೆ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.

ಗದಗ ಜಿಲ್ಲಾ ನಿರ್ದೇಶಕ ಯೋಗೀಶ್, ಪ್ರಮುಖರಾದ ಗಂಗಾಧರ ಸ್ವಾಮಿ ಕಲುಬಾಗಿಲಮಠ, ವೀರೇಶ ಸಮಗಂಡಿ, ರವಿಶಂಕರ್ ಪಾಟೀಲ್, ಶರಣೇಗೌಡ, ರಾಜಾಸಾಬ್, ಕೆ.ಎಚ್.ಕುಲಕರ್ಣಿ, ನಾಗೇಶಪ್ಪ ರೊಟ್ಟಿ, ಜನಜಾಗೃತಿ ವೇದಿಕೆ ಸದಸ್ಯರಾದ ಸಿದ್ದಣ್ಣ ಜಕಲಿ, ಉಲ್ಲಾಸ್ ಕಬ್ಬಿಣದ, ಖಲೀಲ್‌ಸಾಬ್ ಎಲಿಗಾರ್, ಗಂಗಾಧರ್, ರಾಜಾಸಾಬ್ ಎಲಿಗಾರ, ಟಿ ಕೊಪ್ಪಳ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗೇಶ್ ವೈ.ವಿ., ಕ್ಷೇತ್ರ ಯೋಜನಾಧಿಕಾರಿ ಕಾಂತಪ್ಪ ಎಂ.ಕೆ. ಇತರರಿದ್ದರು.