ಬೈಲಹೊಂಗಲ: ರೈತರಿಗೆ ಪದೇ ಪದೆ ಸುಳ್ಳು ಭರವಸೆ ನೀಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೋಸ ಮಾಡುತ್ತಿವೆ. ಬೆಳೆ ಪರಿಹಾರ, ಬೆಳೆ ವಿಮೆ ನೀಡುವುದು. ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸೇರಿಸುತ್ತಿರುವುದು. ಮೂರು ಕಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸುವ ಮೂಲಕ ಡಿ.13ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಲವಾಗಿದೆ. ಕಬ್ಬಿಗೆ ಎ್ಆರ್‌ಪಿ ಜತೆ ಎಸ್‌ಎಪಿಯನ್ನು ರಾಜ್ಯ ಸರ್ಕಾರ ನೀಡಬೇಕು ಹೀಗೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಎಚ್ಚರಿಸಲು ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಭಕ್ತರಳ್ಳಿ ಬೈರೇಗೌಡ, ಜಿಲ್ಲಾ ಗೌರವ ಅಧ್ಯಕ್ಷ ಮಡಿವಾಳಯ್ಯ ಹಿರೇಮಠ, ಈಶ್ವರ ಶಿಲ್ಲೇದಾರ, ಸದಾಶಿವಯ್ಯ ಪತ್ರಿಮಠ, ವಿಠ್ಠಲ ಯಾಸನ್ನವರ, ರಾಮಪ್ಪ ಕುಲಗೋಡ, ಈರಪ್ಪ ಎತ್ತಿನಮನಿ, ಮಡಿವಾಳಪ್ಪ ಹಿರೇಹೊಳಿ, ಮಂಜು ಹುದಲಿ, ಪ್ರಶಾಂತ ಮಲಗಲಿ, ಬಸವರಾಜ ಪೂಜೇರ, ಈರಣ್ಣ ಕುರುಬರ, ಕರೆಪ್ಪ ಕುರುಬರ, ಸತ್ಯಪ್ಪ ವಾಳಿ, ಯಮನಪ್ಪ ಮುತ್ತೆನ್ನವರ, ಈರಣ್ಣ ತೋಟಗಿ ಇತರರಿದ್ದರು.