ಜಿಲ್ಲೆ

ಸುವರ್ಣಸೌಧ ಮುತ್ತಿಗೆ 17ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಸರ್ಕಾರ ಒಳಮೀಸಲಾತಿ ವಿಂಗಡಣೆಗೆ ಮುಂದಾಗಿರುವುದನ್ನು ವಿರೋಧಿಸಿ ಡಿ. 17ರಂದು ಭೋವಿ ವಡ್ಡರ, ಬಂಜಾರ, ಲಮಾಣಿ, ಕೊರಮ, ಕೊರಚ ಜಾತಿಗಳ ಮಹಾ ಒಕ್ಕೂಟ ವತಿಯಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ವೈ. ಕೊಟ್ರೇಶ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರು. ರಾಜ್ಯ ಸರ್ಕಾರ ಅವೈಜ್ಞಾನಿಕ, ಅಸಂವಿಧಾನಿಕವಾಗಿ ಕಾನೂನು ಬಾಹಿರ ಮತ್ತು ದ್ವೇಷ ಅಶಾಂತಿಗೆ ಕಾರಣವಾಗಿರುವ ಒಳಮೀಸಲಾತಿಯ ವಿಂಗಡಣೆನೆಗೆ ಮುಂದಾಗಿರುವುದು ಸರಿಯಲ್ಲ ಎಂದರು.

ಈ ವಿಷಯವಾಗಿ ಮುಖ್ಯಮಂತ್ರಿಗೆ ಸಹ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಸೂಕ್ತ ನಿರ್ಣಯ ಕೈಗೊಂಡಿಲ್ಲ. ಸರ್ಕಾರದ ಈ ಅವೈಜ್ಞಾನಿಕ, ಸಂವಿಧಾನ ಬಾಹಿರ ಒಳಮೀಸಲಾತಿ ವರ್ಗೀಕರಣವು ಮುಂದಿನ ಭವಿಷ್ಯದ ಮಕ್ಕಳ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಲಿದೆ. ಹೀಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಸರ್ಕಾರ ಈ ನಿರ್ಣಯದಿಂದ ಕೂಡಲೇ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಮುತ್ತುರಾಜ ಮಾಕಡವಾಲೆ, ಮಂಜುನಾಥ ಹಿರೇಮನಿ, ಮಾರುತಿ ಮಾಕಡವಾಲೆ, ವಾಸು ಲಮಾಣಿ, ಚಂದ್ರಕಾಂತ ಚವ್ಹಾಣ, ಇತರರು ಇದ್ದರು.