ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಪಂಗೆ ನೂತನ ಅಧ್ಯಕ್ಷೆಯಾಗಿ ಸುವರ್ಣಾ ರಾಮಪ್ಪ ನ್ಯಾಮಗೌಡ ಆಯ್ಕೆಯಾದರು. 
ಜಿಲ್ಲೆ

ಹುಲ್ಯಾಳ ಗ್ರಾಪಂ ಅಧ್ಯಕ್ಷೆ ಸುವರ್ಣಾ ನ್ಯಾಮಗೌಡ

ಜಮಖಂಡಿ: ತಾಲೂಕಿನ ಹುಲ್ಯಾಳ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಸುವರ್ಣಾ ರಾಮಪ್ಪ ನ್ಯಾಮಗೌಡ ಆಯ್ಕೆಯಾಗಿದ್ದಾರೆ.
ದಾನಮ್ಮ ಹಿರೇಮಠ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.

ಚುನಾವಣಾಧಿಕಾರಿ ತಾಪಂ ಇಒ ಸಂಜೀವ ಜುನ್ನೂರ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ತಾಪಂ ಎಫ್​ಡಿಎ ರಾಜೀವ ಗುಡೆನ್ನವರ ಕಾರ್ಯನಿರ್ವಹಿಸಿದರು.

ಗ್ರಾಪಂ ಸದಸ್ಯರಾದ ಮಹಾದೇವ ಗುಡೆನ್ನವರ, ದಾನಮ್ಮ ಹಿರೇಮಠ, ಶ್ರೀಶೈಲ ಸುನಗದ, ಸಿದ್ದಪ್ಪ ತುಂಗಳ, ಬಂಗಾರೆವ್ವ ಝಲ್ಫಿ, ಲಚ್ಚಪ್ಪ ಹೆಬ್ಬಾಳಟ್ಟಿ, ಸವಿತಾ ಕೃಷ್ಣಗೋಳ, ಹನುಮವ್ವ ಹಲಗಲಿ, ಹಿರಿಯರಾದ ಅಶೋಕ ಝುಲ್ಪಿ, ಮಾನಿಂಗ ಮುಗಳಖೋಡ, ನಿಂಗಪ್ಪ ಮುಂಡಾಗಣಿ ಇದ್ದರು.