ಜಿಲ್ಲೆ

ಸುಟ್ಟಟ್ಟಿ ಪಿಕೆಪಿಎಸ್‌ಗೆ ಮುರಾರಿ ಅಧ್ಯಕ್ಷ

ಪ್ರಶಾಂತ ಹೂಗಾರ

ಕುಡಚಿ: ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮುರಾರಿ ಬಾನೆ ಹಾಗೂ ಉಪಾಧ್ಯಕ್ಷರಾಗಿ ಅಪ್ಪಾಸಾಬ ಹೆಗಡೆ ಅವಿರೋಧ ಆಯ್ಕೆಯಾಗಿದ್ದಾರೆ.

ನೂತನ ಸದಸ್ಯರಾಗಿ ಮಾರುತಿ ನಾಯ್ಕ, ಬಸಪ್ಪ ಹಟ್ಟಿಮನಿ, ಸುಭಾಷ ಖೋತ, ಶ್ರೀಕಾಂತ ಮಗದುಮ್ಮ, ವಿದ್ಯಾಶ್ರೀ ಖೋತ, ಶಿವದೇವಿ ಹಳಿಂಗಳಿ, ಗಜೇಂದ್ರ ಸವದತ್ತಿ, ಚಿಂತಾಮಣಿ ಅಕ್ಕೇನವರ, ಹೊಳೆಪ್ಪ ಶೆಟ್ಟೆಪ್ಪಗೋಳ, ಪ್ರಮೋದ ಕುಸನಾಳೆ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾಕಾರಿಯಾಗಿ ಅಮಿತ ಶಿಂಧೆ ಕಾರ್ಯನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಕೆ.ಎಂ. ತಿಗಡಿ ಉಪಸ್ಥಿತರಿದ್ದರು.

ಸುಟ್ಟಟ್ಟಿ ಗ್ರಾಮದ ಪಿಕೆಪಿಎಸ್‌ಗೆ ಆಯ್ಕೆಯಾದ ಅಧ್ಯಕ್ಷ ಮುರಾರಿ ಬಾನೆ  ಹಾಗೂ ಉಪಾಧ್ಯಕ್ಷ ಅಪ್ಪಸಾಬ ಹೆಗಡೆ ಜತೆಗೆ ನೂತನ ಸದಸ್ಯರಾದ  ಮಾರುತಿ ನಾಯ್ಕ, ಬಸಪ್ಪ ಹಟ್ಟಿಮನಿ, ವಿದ್ಯಾಶ್ರೀ ಖೋತ, ಶಿವದೇವಿ ಹಳಿಂಗಳಿ ಅವರನ್ನು ಸನ್ಮಾನಿಸಲಾಯಿತು.