ಜಿಲ್ಲೆ

ಫೆ. 2ರಂದು ಸುತಗಟ್ಟಿ ಕಾರ್ಣಿಕೋತ್ಸವ

ಹುಬ್ಬಳ್ಳಿ: ತಾಲೂಕಿನ ಸುತಗಟ್ಟಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವರ ಕಾರ್ಣಿಕೋತ್ಸವ, 24ನೇ ವರ್ಷದ ಜಾತ್ರೆ ಫೆ. 2ರಂದು ಆಯೋಜಿಸಲಾಗಿದೆ.

ಈಗಾಗಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಜ. 31ರಂದು ಸಂಜೆ ತ್ರಿಶೂಲ ಪೂಜೆ, ಫೆ. 1ರಂದು ಸಂಜೆ ಬಿಲ್ಲು ಪೂಜೆ, ರಾತ್ರಿ ಡೊಳ್ಳಿನ ಜಾಗರಣೆ ನಡೆಯಲಿದೆ.

ಫೆ. 2ರಂದು ಬೆಳಗ್ಗೆ ಕಾಕಡಾರತಿ, ರುದ್ರಾಭಿಷೇಕ, ಶ್ರೀ ಸ್ವಾಮಿಯ ಮಣಿಮಲ್ಲಾಸುರ ಸಂವಾರಕ್ಕೆ ಗುಪ್ತ ಮೌನ ಸವಾರಿ, ಬೆಳಗ್ಗೆ 9ಕ್ಕೆ ಡೊಳ್ಳು, ಜಾಂಜ್ ಮೇಳ, ಭಜನಾ ಮೇಳ, ಕರಡಿ ಮಜಲು ಹಾಗೂ ವಿವಿಧ ಕಲಾ ಮೇಳಗಳೊಂದಿಗೆ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಜರುಗಲಿದೆ.

ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ, ಮಧ್ಯಾಹ್ನ 3.45ಕ್ಕೆ ಕಾರ್ಣಿಕೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.