ಜಿಲ್ಲೆ

ನಾಪೋಕ್ಲುವಿನಲ್ಲಿ ಸುಸೂತ್ರ

Kodagu

ನಾಪೋಕ್ಲು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ನೋಂದಣಿಯಾಗಿದ್ದ 185 ಹಾಗೂ ಪುತ್ತೂರು ಮಂಗಳೂರು ಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 25 ವಿದ್ಯಾರ್ಥಿಗಳು ಸೇರಿ 210 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಧರಿಸುವಿಕೆಯಂತಹ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಯಿತು. ಸುರಕ್ಷತೆ ದೃಷ್ಟಿಯಿಂದ ಪತ್ಯೇಕ ಕೊಠಡಿಯೊಂದನ್ನು ಕಾಯ್ದಿರಿಸಲಾಗಿತ್ತು.