ಚಿತ್ರದುರ್ಗ: ಪದೇ ಪದೆ ಅನಧಿಕೃತ ಗೈರು ಹಾಜರಿ, ಕರ್ತವ್ಯದ ಮೇಲೆ ನಿರ್ಲಕ್ಷೃ ತೋರಿದ ಕಾರಣಕ್ಕೆ ಹೊಳಲ್ಕೆರೆ ತಾಪಂ ದ್ವಿತೀಯ ದರ್ಜೆ ಸಹಾಯಕ ಟಿ.ಎನ್. ವಿನಯ್‌ಕುಮಾರ್, ಹೊಸದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ದ್ವಿತೀಯ ದರ್ಜೆ ಸಹಾಯಕ ಎನ್. ರಂಗಸ್ವಾಮಿ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.
ವಿನಯ್‌ಕುಮಾರ್ ರಜೆ ಅರ್ಜಿ ಸಲ್ಲಿಸದೆ, ಮೇಲಾಧಿಕಾರಿ ಅನುಮತಿಯನ್ನೂ ಪಡೆಯದೇ ಗೈರಾಗಿ ಕಚೇರಿಯ ದೈನಂದಿನ ಕೆಲಸಕ್ಕೆ ಅಡಚಣೆ ಮಾಡಿರುತ್ತಾರೆ. ಹೀಗಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಪಂ ಇಒ ವರದಿ ಸಲ್ಲಿಸಿದ್ದರು. ಇದನ್ನಾಧರಿಸಿ ಇಲಾಖೆ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅ ಮಾನತುಗೊಳಿಸಲಾಗಿದೆ.
ಎನ್. ರಂಗಸ್ವಾಮಿ ಹಲವು ಬಾರಿ ಕರ್ತವ್ಯಕ್ಕೆ ಮೇಲಾಧಿಕಾರಿ ಪೂರ್ವಾನುಮತಿ ಇಲ್ಲದೆ ಗೈರಾಗಿದ್ದರು. ಈ ಕುರಿತು ಹಲವು ಬಾರಿ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಸಮಂಜಸ ಉತ್ತರ ನೀಡದೆ ಕಳೆದ 2025ರ ಮೇ 14ರಿಂದ ಜೂನ್ 10 ರವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ.
ಹೀಗಾಗಿ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ವರದಿ ಸಲ್ಲಿಸಿರುತ್ತಾರೆ. ಇದರನ್ವಯ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.