ಲಿಂಗಸುಗೂರು ಎಸಿ ಕಚೇರಿಯಲ್ಲಿ ಹಮಾಲಿ ಕಾರ್ಮಿಕರ ಮತ್ತು ಅಧಿಕಾರಿಗಳ ಜಂಟಿ ಸಭೆ ಜರುಗಿತು. ಹಮಾಲಿ ಫೆಡರೇಷನ್ ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್, ಕಾರ್ಯದರ್ಶಿ ಮರಿಸ್ವಾಮಿ, ಮುಖಂಡರಾದ ಹನೀಫ್, ಫಕ್ರುದ್ದೀನ್, ಮಲ್ಲೇಶ್ ಕೋಠಾ, ನಿಂಗಪ್ಪ, ಬಾಬಾಜಾನಿ, ವಿಶ್ವ ಅಂಗಡಿ, ಅಂಜಪ್ಪ, ನಾಗರಾಜ್, ಕಾಶಿಪತಿ, ಬಾಲಾಜಿ ಹಟ್ಟಿ, ತೋಟೇಶ್ವರ್, ಆಂಜನೇಯ, ಸದ್ದಾಮ್ ಹುಸೇನ್, ಮಹಮ್ಮದ್ ಅಲಿ ಇದ್ದರು. 
ಜಿಲ್ಲೆ

ಕಾರ್ಮಿಕ ನಿರೀಕ್ಷಕನನ್ನು ಅಮಾನತು ಮಾಡಿ

Gangavati - Desk - Veeresh S Ullagaddi

ಲಿಂಗಸುಗೂರು: ಸರ್ಕಾರ ಹಮಾಲಿ ದರ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದ್ದು, ಆದರೆ ಪರಿಷ್ಕೃತ ಹಮಾಲಿ ದರ ನೀಡಲು ನಿರಾಕರಿಸುತ್ತಿರುವ ಮುದಗಲ್‌ನ ಅಂಗಡಿ ಮಾಲಿಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹಮಾಲಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ತಿಪ್ಪಯ್ಯ ಒತ್ತಾಯಿಸಿದರು.


ಪಟ್ಟಣದ ತಹಸಿಲ್ ಕಚೇರಿಯಲ್ಲಿ ಎಸಿ ಅವಿನಾಶ ಶಿಂಧೆ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಧಿಕಾರಿ, ಹಮಾಲಿ ಕಾರ್ಮಿಕರ ಜಂಟಿ ಸಭೆಯಲ್ಲಿ ಮಾತನಾಡಿದರು.


ಸರ್ಕಾರದ ಆದೇಶದಂತೆ ಹಮಾಲಿ ಕಾರ್ಮಿಕರಿಗೆ ಪರಿಷ್ಕೃತ ದರ ನೀಡಲು ಒಪ್ಪದ ಅಂಗಡಿ ಮಾಲಿಕರಿಗೆ ಸಭೆಗೆ ಹಾಜರಾಗುವಂತೆ ಕಾರ್ಮಿಕ ನಿರೀಕ್ಷಕರು ನೋಟೀಸ್ ನೀಡಿದ್ದರೂ ಗೈರು ಹಾಜರಾಗಿದ್ದರು. ಮದಿನಾ ಟ್ರೇಡರ್ಸ್ ಮಾಲಿಕ ಟಿಪ್ಪು ಸಾಬ್ ಎಂಬುವರು ಸಭೆಗೆ ಯಾರೂ ಹೋಗಬೇಡಿ ಎಂದು ಕೆಲ ಅಂಗಡಿ ಮಾಲಿಕರಿಗೆ ಒತ್ತಡ ಹಾಕಿದ್ದಾರೆ. ಇದರಿಂದ ಮುದಗಲ್ ಠಾಣೆ ಎಸ್‌ಐ, ಕಾರ್ಮಿಕ ನಿರೀಕ್ಷಕರು, ತಹಸೀಲ್ದಾರ್ ಸಂಧಾನ ಸಭೆ ಕರೆದಾಗಲೂ ಟಿಪ್ಪುಸಾಬ್ ಸಭೆಗೆ ಗೈರಾಗಿ ಆಡಳಿತ ವ್ಯವಸ್ಥೆಗೆ ಸವಾಲಾಗಿದ್ದಾನೆ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದ ಕಾರ್ಮಿಕ ನಿರೀಕ್ಷಕರನ್ನು ಅಮಾನತು ಮಾಡಬೇಕು ಎಂದು ಆಗ್ರಹಿದರು.


ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, ಸರ್ಕಾರದ ನಿಯಮ ಪಾಲಿಸದ ಅಂಗಡಿ ಮಾಲಿಕರ ಲೈಸೆನ್ಸ್ ರದ್ದು ಪಡಿಸಬೇಕು. ಮದೀನಾ ಟ್ರೇಡರ್ಸ್ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರ


ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಮಾತನಾಡಿ, ಈಗಾಗಲೆ ಸರ್ಕಾರ ನಿಗದಿ ಪಡಿಸಿದ ಹಮಾಲಿ ದರ ನೀಡಲು ಒಪ್ಪದ ಅಂಗಡಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಸರ್ಕಾರದ ನಿಯಮದಂತೆ ಹಮಾಲಿ ದರ ನೀಡಲು ಇಲಾಖೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.


ಎಸಿ ಅವಿನಾಶ ಶಿಂಧೆ ಮಾತನಾಡಿ, ಈಗಾಗಲೆ ಕರೆಯಲಾದ ಮೂರು ಸಭೆಗಳಿಗೆ ಅಂಗಡಿ ಮಾಲಿಕರು ಗೈರು ಹಾಜರಾಗಿ ಕಾನೂನಿಗೆ ಬೆಲೆ ನೀಡದಿರುವುದು ಕಂಡು ಬಂದಿದೆ. ಸಭೆಗೆ ಗೈರಾದ ಅಂಗಡಿ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ನಿರೀಕ್ಷಕರಿಗೆ ಸೂಚಿಸಿದರು. ಅಂಗಡಿಗಳ ಲೈಸೆನ್ಸ್ ಪರವಾನಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುದಗಲ್ ಪಪಂ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.


ಹಮಾಲಿ ಫೆಡರೇಷನ್ ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್, ಕಾರ್ಯದರ್ಶಿ ಮರಿಸ್ವಾಮಿ, ಮುಖಂಡರಾದ ಹನೀಫ್, ಫಕ್ರುದ್ದೀನ್, ಮಲ್ಲೇಶ್ ಕೋಠಾ, ನಿಂಗಪ್ಪ, ಬಾಬಾಜಾನಿ, ವಿಶ್ವ ಅಂಗಡಿ, ಅಂಜಪ್ಪ, ನಾಗರಾಜ್, ಕಾಶಿಪತಿ, ಬಾಲಾಜಿ ಹಟ್ಟಿ, ತೋಟೇಶ್ವರ್, ಆಂಜನೇಯ, ಸದ್ದಾಮ್ ಹುಸೇನ್, ಮಹಮ್ಮದ್ ಅಲಿ ಇದ್ದರು.