ಜಿಲ್ಲೆ

ಒಣ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ

ಕಿರಣ್ ಗೌಡ.ಜಿ

ಶ್ರೀರಂಗಪಟ್ಟಣ: ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಅಕ್ರಮವಾಗಿ 12.940 ಕೆಜಿ ಒಣ ಗಾಂಜಾ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ಕಲ್ಯಾಣನಗರದ ಅಂಬೇಡ್ಕರ್ ಬಡಾವಣೆ ನಿವಾಸಿ ಅಬ್ದುಲ್ ರೆಹಮಾನ್ ಅವರ ಪುತ್ರ ಇರ್ಷಾದ್(44) ಹಾಗೂ ಗುಂಡ್ಲುಪೇಟೆ ಈದ್ಗಾ ಮೊಹಲ್ಲಾ, ಕಾರ್ಖಾನೆ ಬೀದಿಯ ನಿವಾಸಿ ನವಾಬ್ ಅವರ ಪುತ್ರ ಅಕ್ಬರ್ ಅಲಿಯಾಸ್ ಮುಬಾರಕ್(38)ಬಂಧಿತರು.

ತಾಲೂಕಿನ ಬೊಮ್ಮೂರು ಅಗ್ರಹಾರ ಗೇಟ್ ಬಳಿಯ ಹಳೆಯ ಮೈ-ಬೆಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಮೈಸೂರು ಕಡೆಯಿಂದ ಶ್ರೀರಂಗಪಟ್ಟಣ ಕಡೆಗೆ ಆರೋಪಿಗಳಿಬ್ಬರು 7 ಲಕ್ಷ ರೂ. ಮೌಲ್ಯದ 12 ಕೆಜಿ 940 ಗ್ರಾಂ ಒಣ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಣೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಮೈಸೂರು ವಿಭಾಗ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ, ಮಂಡ್ಯ ಜಿಲ್ಲಾ ಉಪ ಆಯುಕ್ತ ಡಾ.ಆರ್.ನಾಗಶಯನ ಅವರ ನಿರ್ದೇಶನದ ಮೇರೆಗೆ ಪಾಂಡವಪುರ ಉಪವಿಭಾಗದ ಅಧೀಕ್ಷಕಿ ವಿ.ಬಿ.ರಾಧಾಮಣಿ ಅವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ವಲಯ ಅಬಕಾರಿ ನೀರಿಕ್ಷಕ ವೈ.ಜೆ.ಪ್ರಫುಲ್ಲಾ ಚಂದ್ರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿ ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ತಾಲೂಕು ಪಶುವೈದ್ಯಾಧಿಕಾರಿ ಡಾ.ಸಿ.ಜಿ.ಸುರೇಶ್ ನೆರವು ನೀಡಿದ್ದು, ಅಬಕಾರಿ ಉಪ ನಿರೀಕ್ಷಕ ಬಿ.ಶಿವಣ್ಣ, ಎಚ್.ವಿ.ರಾಮು, ಎಂ.ಎನ್.ನಾಗೇಂದ್ರ, ಎಸ್.ಎನ್.ಯೋಗೇಶ್, ಪಿ.ಜಿ.ದಿಲೀಪ್ ಕುಮಾರ್, ಅಬಕಾರಿ ಮುಖ್ಯ ಪೇದೆಗಳಾದ ತನುಜಾ, ವೈರಮುಡಿ, ಪೇದೆಗಳಾದ ಸಂದೀಪ್ ವಾಹನ ಚಾಲಕ ಇದ್ದರು.