ಜಿಲ್ಲೆ

ಶಂಕಿತ ಉಗ್ರನ ಬಳಿ ಕಲಬುರಗಿ ವಿಳಾಸದ ಆಧಾರ್ ಕಾರ್ಡ್ !

ಕಲಬುರಗಿ: ಭಾರಿ ಸದ್ದು ಮಾಡಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಿಕ್ಕು ಬಿದ್ದಿರುವ ಬಾಂಬರ್ ಬಳಿ ಕಲಬುರಗಿ ವಿಳಾಸದ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ.

ಬಾಬುರಾವ ಯಡ್ರಾಮಿ


ಕಲಬುರಗಿ: ಭಾರಿ ಸದ್ದು ಮಾಡಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಿಕ್ಕು ಬಿದ್ದಿರುವ ಬಾಂಬರ್ ಬಳಿ ಕಲಬುರಗಿ ವಿಳಾಸದ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಕೋಲ್ಕತದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರರ ಬಳಿ ಕಲಬುರಗಿ ಯುವಕನ ಆಧಾರ್ ಕಾರ್ಡ್ ಇರುವುದು ತನಿಖಾ ತಂಡ ಎನ್‌ಐ ಗಮನಕ್ಕೆ ಬಂದಿದೆ. ಬೆಂಗಳೂರಿನಲ್ಲಿರುವ ಟೆಕ್ಕಿ ಅನಮೋಲ್ ಕುಲಕರ್ಣಿ ಎಂಬುವರ ಹೆಸರಿನಲ್ಲಿ ನಗರದ ಜೇವರ್ಗಿ ರಸ್ತೆಯ ವರದಾ ನಗರದ ವಿಳಾಸವಿತ್ತು. ಅದನ್ನು ತನಿಖಾ ತಂಡದವರು ಪರಿಶೀಲಿಸಿದಾಗ ಅಲ್ಲಿ ಖಾಲಿ ನಿವೇಶನ ಇರುವುದು ಬೆಳಕಿಗೆ ಬಂದಿದೆ. ಕಲಬುರಗಿ ಯುವಕನ ಆಧಾರ್ ಕಾರ್ಡ್ ಅನ್ನು ಶಂಕಿತ ಉಗ್ರ ಬಳಸಿರುವಂತಿದೆ. ಕುಲಕರ್ಣಿ ಆಧಾರ ಕಾರ್ಡ್ ಬಂಧಿತ ಶಂಕಿತ ಉಗ್ರ ಅಬ್ದುಲ್ ಮತೀನ್‌ಗೆ ಹೇಗೆ ಸಿಕ್ಕಿತು? ಯಾರಿಂದ ಕಾರ್ಡ್ ಪಡೆದ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅನಮೋಲ್‌ಗೂ ಬಾಂಬ್ ಸ್ಫೋಟಕ್ಕೂ ಸಂಬAಧವಿಲ್ಲ. ಬೇರೊಬ್ಬರ ಹೆಸರಿನ ಕಾರ್ಡ್ ಬಳಸಿ ಉಗ್ರ ತಪ್ಪಿಸಿಕೊಳ್ಳಲು ಪ್ಲಾÈನ್ ಮಾಡಿರುವಂತಿದೆ ಎನ್ನಲಾಗಿದೆ.