ಕಾಸರಗೋಡು: ವಿವಾಹ ಪ್ರಸ್ತಾಪ ತಿರಸ್ಕರಿದರೆಂದು ಕೋಪದಿಂದ ಮಹಿಳೆಗೆ ಇರಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಆಡೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಡೂರು ಸಮೀಪದ ಮಂಡೆಕೋಲು ನಿವಾಸಿ ಪ್ರತಾಪ್ ಬಂಧಿತ. ಆತನ ಸ್ನೇಹಿತನ ಪತ್ನಿ ಕೆಲಸ ಮುಗಿಸಿ ಅಡೂರು ಏಳುವರೆಗುರಿ ಮಾರ್ಗದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಅಲ್ಲೇ ಅಡಗಿ ಕುಳಿತಿದ್ದ ಪ್ರತಾಪ್ ಹಠಾತ್ತನೆ ಮಹಿಳೆ ಮೇಲೆ ದಾಳಿ ನಡೆಸಿ ಚೂರಿಯಿಂದ ಇರಿಯಲು ಯತ್ನಿಸಿದ್ದಾನೆ. ಮಹಿಳೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆಡೂರು ಬಸ್ ನಿಲ್ದಾಣ ಪರಿಸರದಿಂದ ಆದೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.