ಜಿಲ್ಲೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೇಕ್ ಕತ್ತರಿಸಿದ ಸೂರ್ಯ ದಂಪತಿ

Mangaluru - Hariprasad Rai



ಮಂಗಳೂರು : ವಿಶ್ವ ಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಸೋಮವಾರ ಪತ್ನಿ ಸಹಿತ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ .
ಸೂರ್ಯಕುಮಾರ್ ಅವರ ಪತ್ನಿ ದೇವಿಷಾ ಶೆಟ್ಟಿ ಉಡುಪಿ ಮೂಲದವರಾಗಿದ್ದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ ಎನ್ನುವ ಮಾಹಿತಿ ಇದೆ. ಜು.7ರಂದು ಸೂರ್ಯಕುಮಾರ್ ಮತ್ತು ದೇವಿಷಾ ಅವರ ವಿವಾಹ ವಾರ್ಷಿಕೋತ್ಸವದ ದಿನವಾಗಿತ್ತು. ಅವರ ಆಗಮನವನ್ನು ಮುಂಚಿತವಾಗಿ ತಿಳಿದ ವಿಮಾನ ನಿಲ್ದಾಣದ ಅಧಿಕಾರಿಗಳು ವಿವಾಹ ವಾರ್ಷಿಕೋತ್ಸವದ ಶುಭ ಕೋರಲು ಕೇಕ್ ಸಿದ್ದಪಡಿಸಿದ್ದರು. ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಕೇಕ್ ಕತ್ತರಿಸಿದ ಸೂರ್ಯ ದಂಪತಿ ಬಳಿಕ ವಾಹನ ಏರಿ ಉಡುಪಿಗೆ ತೆರಳಿದರು.